LATEST NEWS
ಸ್ಕಾರ್ಪ್ ವಿವಾದ – ಈವರೆಗೂ ಇಲ್ಲದ ವಿರೋಧ ಈ ಆರು ವಿದ್ಯಾರ್ಥಿನಿಯರಿಂದ ಬರುತ್ತಿದೆ – ಕಾಲೇಜು ಪ್ರಾಂಶುಪಾಲ ರುದ್ರೇಗೌಡ

ಉಡುಪಿ : ಸರಕಾರಿ ಬಾಲಕಿಯರ ಕಾಲೇಜಿನಲ್ಲಿ ತರಗತಿಯಲ್ಲಿ ಹಿಜಾಬ್ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಕಾಲೇಜು ಪ್ರಾಂಶುಪಾಲ ರುದ್ರೇಗೌಡ ಅವರು ಪ್ರತಿಕ್ರಿಯೆ ನೀಡಿದ್ದು, ವಿಧ್ಯಾರ್ಥಿಗಳ ಐಡೆಂಟಿಗೆ ಈ ನಿಯಮ ಮಾಡಲಾಗಿದ್ದು, ಇದನ್ನು ಎಲ್ಲರೂ ಪಾಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಆರು ಮಂದಿ ವಿಧ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ನಿರ್ಬಂಧಿ ವಿದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಕಾಲೇಜು ಪ್ರಾಂಶುಪಾಲ ರುದ್ರೇಗೌಡ ವಿಧ್ಯಾರ್ಥಿನಿಯರಿಗೆ ತರಗತಿವರೆಗೂ ಹಿಜಾಬ್ ಧರಿಸಲು ಅನುಮತಿ ಇದೆ ಆದರೆ ತರಗತಿಯೊಳಗೆ ಹಿಜಾಬ್ ಸ್ಕಾರ್ಫ್ ಹಾಕೋಹಾಗಿಲ್ಲ, ವಿಧ್ಯಾರ್ಥಿನಿಯರ ಐಡೆಂಟಿಗೆ ಈ ನಿಯಮ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಆರು ಮಂದಿ ವಿದ್ಯಾರ್ಥಿನಿಯರು ಸ್ಕಾರ್ಪ್ ಹಾಕುತ್ತಿದ್ದಾರೆ, ಆದರೆ ಕಾಲೇಜು ನಿಯಮ ಶಿಸ್ತು ಹಾಗೂ ಸಮಾನತೆಗೆ ಒತ್ತು ನೀಡಿದೆ. ಸ್ಕಾರ್ಫ್ ಹಾಕಿ ಇನ್ಯಾರೋ ತರಗತಿಗೆ ಬರುವಂತಾಗಬಾರದು, ನಮ್ಮ ಕಾಲೇಜು ವಿದ್ಯಾರ್ಥಿನಿ ಎಲ್ಲೆಲ್ಲೋ ತಿರುಗಾಡಿ ಅನಾಹುತ ಮಾಡಿಕೊಳ್ಳಬಾರದು, ಹೀಗಾಗಿ ಸ್ಕಾರ್ಫ್ ಬೇಡ ಹೇಳುತ್ತಿದ್ದೇವೆ. ಈವರೆಗೂ ಇಲ್ಲದ ವಿರೋಧ ಈ ಆರು ವಿದ್ಯಾರ್ಥಿನಿಯರಿಂದ ಬರುತ್ತಿದೆ.

ಈ ಕುರಿತಂತೆ ನಾಳೆ ಪೋಷಕರ ಹಾಗೂ ಕಾಲೇಜು ಆಡಳಿತ ಮಂಡಳಿ ಮೀಟಿಂಗ್ ಇದ್ದು. ಈ ಕುರಿತಂತೆ ಅಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.