BANTWAL
ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮುಳುಗಡೆಯಾದ ರಸ್ತೆಗಳು
ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮುಳುಗಡೆಯಾದ ರಸ್ತೆಗಳು
ಮಂಗಳೂರು ಜುಲೈ 7: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿಯೇ ಕೊಚ್ಚಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿಸಿರೋಡ್-ಅಡ್ಡಹೊಳೆ ಮಾರ್ಗದ ನಡುವೆ ಉಪ್ಪಿನಂಗಡಿಯ ನೀರಕಟ್ಟೆ ಪ್ರದೇಶದಲ್ಲಿ ನಡೆಯುತ್ತಿದ್ದ ಕಾಮಗಾರಿ ರಸ್ತೆ ಕೊಚ್ಚಿ ಹೋಗಿದೆ.
ಈ ನಡುವೆ ಇತ್ತೀಚೆಗಷ್ಟೇ ಮುಲ್ಲರಪಟ್ಣ ಸೇತುವೆ ಮುರಿದುಬಿದ್ದಿದ್ದು, ತಾತ್ಕಲಿಕವಾಗಿ ಜನ ತೂಗು ಸೇತುವೆ ಬಳಸುತ್ತಿದ್ದರು, ಆದರೆ ಈಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮೂಲರಪಟ್ನ ನಿವಾಸಿಗಳ ಬದುಕು ಮತ್ತಷ್ಟು ಅತಂತ್ರಗೊಂಡಿದೆ. ಸೇತುವೆ ಮುರಿದು ಬಿದ್ದಿದ್ದರಿಂದ ಮೂಲರಪಟ್ನ – ಮುತ್ತೂರು ಗ್ರಾಮಸ್ಥರ ಬದುಕು ಅತಂತ್ರವಾಗಿತ್ತು. ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ಮಂಗಳೂರು, ಕುಪ್ಪೆಪದವು, ಬಂಟ್ವಾಳ ಹಾಗೂ ಬಿಸಿರೋಡ್ ಕಡೆಗೆ ರಸ್ತೆ ಮೂಲಕ ಹೋಗಲು ಬೇರೆ ಬೇರೆ ಮಾರ್ಗವನ್ನು ಬಳಸಬೇಕಾಗಿತ್ತು. ಇದೊಂದು ತ್ರಾಸದಾಯಕವಾಗಿತ್ತು. ಇನ್ನು ಮೂಲರಪಟ್ನದಿಂದ ಮುತ್ತೂರು ಕಡೆಗೆ ನಡೆದುಕೊಂಡು ಹೋಗಲು ಮೂಲರಪಟ್ಣ ತೂಗುಸೇತುವೆಯನ್ನ ಬಳಸುವಂತೆ ಸೂಚಿಸಲಾಗಿತ್ತು.
ಆದರೆ ಈ ತೂಗುಸೇತುವೆಗೆ ಹೋಗುವ ತಾತ್ಕಾಲಿಕ ರಸ್ತೆ ಭಾರೀ ಮಳೆಯಿಂದ ಮುಳುಗಡೆಯಾಗಿದೆ. ಇದರಿಂದ ಮೂಲರಪಟ್ನ ನಿವಾಸಿಗಳ ಬದುಕು ಮತ್ತಷ್ಟು ಅತಂತ್ರಗೊಂಡಿದೆ.