Connect with us

LATEST NEWS

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ: ಪ್ರಬಲ ಹೋರಾಟಕ್ಕೆ ಸಜ್ಜು

ಮಂಗಳೂರು ಅಕ್ಟೋಬರ್ 14: ಹೈ ಕೋರ್ಟ್ ಪೀಠ ಹೋರಾಟ ಸಮಿತಿ ಇದರ ಸಭೆ ಎಸ್. ಡಿ. ಎಮ್. ಕಾನೂನು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಹೈ ಕೋರ್ಟ್ ಪೀಠ ರಚನೆ ಹೋರಾಟ ದ ಕಾನೂನು  ಮತ್ತು ಕೈಗೊಳ್ಳಬೇಕಾದ ಕ್ರಮ ಗಳ ಬಗ್ಗೆ ನ್ಯಾಯವಾದಿ ಗಳಾದ ಎಂ. ಪಿ ನರೋನ್ನಾ ರವರು ವಿವರಿಸಿದರು.

ಸಭೆಯ ಮುಖ್ಯ ಅಂಶ ಗಳು
1. ಎಲ್ಲಾ ಸಾರ್ವಜನಿಕ ವಲಯದ ಜನತೆಯ ಪ್ರತಿನಿಧಿ ಗಳನ್ನು ಒಳಗೊಂಡ ನಿಯೋಗ ರಾಜ್ಯ ದ ಮುಖ್ಯಮಂತ್ರಿ, ಕಾನೂನು ಸಚಿವರು ರನ್ನು ಭೇಟಿ ಯಾಗಿ ಮನವಿ ಸಲ್ಲಿಸಿ  ಪೀಠ ಸ್ಥಾಪನೆ ಗೆ ಒತ್ತಾಯಿಸುವುದು.
2. ಸಾಧ್ಯವಾದರೆ ಮಂಗಳೂರು ನಗರದ ಒಳಗೆ ಅಥವಾ ಮಂಗಳೂರು ಉಡುಪಿ ಮದ್ಯದಲ್ಲಿ ಜಾಗ ನಿಗದಿ ಪಡಿಸಲು ಪ್ರಯತ್ನ ಮಾಡುವುದು.
ಮಂಗಳೂರನಲ್ಲಿ ಸರ್ಕಿಟ್ ಹೌಸ್ ಹತ್ತಿರದಲ್ಲಿ  ಇರುವ ಜಾಗವನ್ನು ಹೈ ಕೋರ್ಟ್ ಪೀಠ ಕ್ಕೆ ಮೀಸಲು ಇಡಲು ಮಾನ್ಯ ಪ್ರವಾಸೋದ್ಯ ಸಚಿವರಿಗೆ ಮನವಿ ಮಾಡುವುದು.
3. ಹೋರಾಟ ದ ಭಾಗವಾಗಿ ಜನಭಿಪ್ರಾಯ ಮೂಡಿಸಲು ಮುಲ್ಕಿ ಯಿಂದ ಮಂಗಳೂರಿಗೆ  ಪಾದಯಾತ್ರೆ ನಡೆಸುವುದು
4. ಪೀಠ ಸ್ಥಾಪನೆ ಗೆ ಅಗ್ರಹಿಸಿ ಮಂಗಳೂರು ಬಂದ್ ಗೆ  ಕರೆ ನೀಡುವುದು
5. ಮುಂಬರುವ ರಾಜ್ಯ ಬಜೆಟ್ ನಲ್ಲಿ  ಹೈ ಕೋರ್ಟ್ ಪೀಠ ಸ್ಥಾಪನೆಗೆ 25 ಕೋಟಿ ಅನುದಾನ ಒದಗಿಸುವಂತೆ  ಸರ್ಕಾರವನ್ನು ಅಗ್ರಹಿಸುವುದು.
6. ರಾಜಕೀಯ, ಸಾಮಾಜಿಕ, ಧಾರ್ಮಿಕ, ಮತ್ತು ಇತರ ಎಲ್ಲಾ ವಲಯ ದ ಪ್ರಭಾವಿ ವ್ಯಕ್ತಿಗಳ ಬೆಂಬಲ ಒಡೆದು ಕೊಳ್ಳುವುದು.
7. ಆರು ಜಿಲ್ಲೆಯ ಪ್ರಮುಖರನ್ನು ಮುಖತಾ ಭೇಟಿ ಮಾಡಿ ಹೋರಾಟ ಕ್ಕೆ ಬೆಂಬಲ ಕೇಳುವುದು
8. ಆರು ಜಿಲ್ಲೆಯ ಪ್ರಮುಖ, ಪ್ರಭಾವಿ ವ್ಯಕಿಗಳನ್ನು ಒಳಗೊಂಡ ಶಾಶ್ವತ ಹೈಕೋರ್ಟ್ ಹೋರಾಟ ಸಮಿತಿ ರಚಿಸುವುದು.
9. ಆರು ಜಿಲ್ಲೆ ಯ ಎಲ್ಲಾ ಮಾಜಿ ಹಾಗೂ ಹಾಲಿ ಜನಪ್ರತಿನಿಧಿಗಳನ್ನು  ಸಭೆ ನಡೆಸಿ ಹೋರಾಟ ದಲ್ಲಿ ಭಾಗವಹಿಸುವಂತೆ ಸಭೆ ಗಳನ್ನು ಮಾಡುವುದು.
8. ಹೈಕೋರ್ಟ್ ಸಂಚಾರಿ ಪೀಠ ಕ್ಕೆ ಒತಾಯ ಮಾಡುವುದು
9. ಕಲಬರ್ಗಿ ಮತ್ತು ಧಾರಾವಾಡ ಪೀಠ ಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ತಯಾರಿ
10. ವೀರಪ್ಪ ಮೊಯಿಲಿ ಸೇರಿ ಅನೇಕ ಪ್ರಭಾವಿ ವ್ಯಕಿ ಗಳನ್ನು ಭೇಟಿ ಮಾಡಿ ಬೆಂಬಲ ಕೇಳುವುದು
11. ಈ ಕುರಿತು ರಾಜ್ಯ ಪ್ರವಾಸ ಕ್ಕೆ ತಂಡ ರಚನೆ
12. ಕಾನೂನು ಹೋರಾಟಕ್ಕೆ, ಸಾರ್ವಜನಿಕ ರ ಭೇಟಿ, ವಕೀಲರು ಸಂಘದ ಭೇಟಿ, ಪ್ರಚಾರ ಮತ್ತು ಮಾಧ್ಯಮ ಸಮಿತಿ ಹೀಗೆ ಅಗತ್ಯಕ್ಕೆ ತಕ್ಕುದಾಗಿ ಸಮಿತಿ ರಚನೆ ಮಾಡುವುದು
13. ಪ್ರತಿ ತಾಲ್ಲೂಕಿನಲ್ಲಿ ಹಾಕ್ಕೋತ್ತಾಯ ಸಭೆ /ಕಾರ್ಯಕ್ರಮ ಆಯೋಜನೆ ಮಾಡುವುದು
14. ಹೋರಾಟ ದ ಪರವಾಗಿ ಇರುವ ಎಲ್ಲಾ ಉಚ್ಚ ನ್ಯಾಯಾಲಯಗಳ ಅದೇಶ ಗಳಿಗೆ ಅನುಗುಣವಾಗಿ ಹೋರಾಟ ದ ರೂಪುರೆಷೆ ರಚನೆ
14. ಬೆಂಬಲ ಕೋರಿ ಸಹಿ ಸಂಗ್ರಹ ಅಭಿಯಾನ ನಡೆಸುವುದು
15. ವಿವಿಧ ಸಂಘಟನೆ ಗಳನ್ನು ಹೋರಾಟ ದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುವುದು
16. ದ. ಕ ಜಿಲ್ಲೆಯ ಎಲ್ಲಾ ವಕೀಲರು ಸಂಘ ದ ಅಧ್ಯಕ್ಷರು, ಕಾರ್ಯದರ್ಶಿ, ಜೊತೆ ಕಾರ್ಯಧರ್ಶಿ, ಉಪಾಧ್ಯಕ್ಷರು, ಖಜಾಂಜಿ ಸೇರಿ ಕೋರ್ ಕಮಿಟಿ ರಚಿಸಲಾಯಿತು ಮತ್ತು ಈ ಕಮಿಟಿಯ whatapp group ಮಾಡುವುದು

Share Information
Continue Reading
Advertisement
Click to comment

Leave a Reply

Your email address will not be published. Required fields are marked *