LATEST NEWS
ಹುಸೆನಬ್ಬ ಕೊಲೆ ಪ್ರಕರಣ – ಹಿರಿಯಡ್ಕ್ ಎಸ್ ಐ ಗೆ ಜಾಮೀನು
ಹುಸೆನಬ್ಬ ಕೊಲೆ ಪ್ರಕರಣ – ಹಿರಿಯಡ್ಕ್ ಎಸ್ ಐ ಗೆ ಜಾಮೀನು
ಉಡುಪಿ ಅಗಸ್ಟ್ 1: ದನದ ವ್ಯಾಪಾರಿ ಹುಸೆನಬ್ಬ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಹಿರಿಯಡ್ಕ ಎಸೈಗೆ ಜಾಮೀನು ಮಂಜೂರಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಮೂಲದ ಜೋಕಟ್ಟೆ ನಿವಾಸಿಯಾಗಿರುವ ಹುಸೇನಬ್ಬ ಕಳೆದ 35 ವರ್ಷಗಳಿಂದ ಹಸುವಿನ ವ್ಯಾಪಾರ ಮಾಡುತ್ತಿದ್ದರು. ಮೇ 30 ರಂದು ಬೆಳಿಗ್ಗೆ ಹುಸೇನಬ್ಬ ಅವರ ಮೃತದೇಹ ಬೆಳಗ್ಗೆ ಕಾಫಿ ತೋಟದಲ್ಲಿ ಪತ್ತೆಯಾಗಿತ್ತು. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದರು.
ಆದರೆ ದನ ಸಾಗಾಟದ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸರ ಜೊತೆಗೂಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತರ ಕುಟುಂಬ ಕೊಲೆ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ಬೆಳಕಿಗೆ ಬಂದಂತೆ ಕರ್ತವ್ಯ ಲೋಪ ವೇಸಗಿದ್ದ ಆರೋಪದಲ್ಲಿ ಹಿರಿಯಡ್ಕ್ ಠಾಣೆಯ ಎಸ್ ಐ ಡಿ.ಎನ್ ಕಮಾರ್ ಅವರನ್ನು ಅಮಾನತುಗೊಳಿಸಿ ಉಡುಪಿ ಎಸ್ಪಿ ಆದೇಶಿಸಿದ್ದರು.
ಕೊಲೆ ಪ್ರಕರಣವನ್ನು ಮುಚ್ಚಿಡಲು ಯತ್ನಿಸಿದ ಹಿರಿಯಡ್ಕ ಎಸೈ ಡಿ.ಎನ್ ಕಮಾರ್ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಕರ್ನಾಟಕ ರಾಜ್ಯ ಹೈಕೋರ್ಟ್ ನಲ್ಲಿ ಹಿರಿಯಡ್ಕ ಎಸೈ ಡಿ.ಎನ್ ಕಮಾರ್ ಗೆ ಜಾಮೀನು ಮಂಜೂರಾಗಿದೆ.