Connect with us

FILM

ಮಲಯಾಳಂ ಚಿತ್ರರಂಗದಲ್ಲಿ ನಟರ ವಿರುದ್ಧ ಲೈಂಗಿಕ ದೌರ್ಜನ್ಯ, ಕಿರುಕುಳಗಳ ಆರೋಪಗಳ ಬಗ್ಗೆ ಪ್ರತಿಕ್ರೀಯಿಸಿದ ನಟ ಪೃಥ್ವಿರಾಜ್..!

ಕೊಚ್ಚಿ :  ಮಲಯಾಳಂ ಚಿತ್ರರಂಗದಲ್ಲಿ ನಟರ ವಿರುದ್ಧ ಲೈಂಗಿಕ ದೌರ್ಜನ್ಯ, ಕಿರುಕುಳಗಳು ಬಹಿರಂಗವಾಗಿರುವ ವಿಚಾರಗಳ ಬಗ್ಗೆ ಖ್ಯಾತ ಮಲಯಾಳಂ ನಟ ಪೃಥ್ವಿರಾಜ್ ಪ್ರತಿಕ್ರಿಯಿಸಿದ್ದಾರೆ.

ಲಯಾಳಂ ಸಿನಿಮಾ ರಂಗದಲ್ಲಿನ ಲೈಂಗಿಕ ದೌರ್ಜನ್ಯದ  ವರದಿ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಜಸ್ಟಿಸ್‍ ಹೇಮಾ ಸಲ್ಲಿಸಿದ ವರದಿಯಲ್ಲಿನ ಕೆಲವು ಅಂಶಗಳು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿವೆ. ಈಗಾಗಲೇ ಕೆಲವರ ತಲೆದಂಡ ಕೂಡ ಆಗಿದೆ. ಅನೇಕ ನಟಿಯರು ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಆದರೆ, ಈ ವರದಿ ಕುರಿತಂತೆ ಪ್ರಮುಖ ನಟರಾರೂ ಬಹಿರಂಗವಾಗಿ ಮಾತಾಡಿರಲಿಲ್ಲ. ಮೊದಲ ಬಾರಿಗೆ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್‍ ಮಾತಾಡಿದ್ದಾರೆ. ಹೇಮಾ ಸಮಿತಿ ವರದಿ ಆಧರಿಸಿ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಪೃಥ್ವಿರಾಜ್ ಹೇಳಿದ್ದಾರೆ. ಅಪರಾಧ ನಡೆದಿದ್ದರೆ ಕ್ರಮ ಕೈಗೊಳ್ಳಬೇಕು. ಆರೋಪ ಸುಳ್ಳು ಎಂದು ಸಾಬೀತಾದರೆ ರಿವರ್ಸ್ ಕ್ರಮ ಕೈಗೊಳ್ಳಬೇಕು ಎಂದೂ ಪೃಥ್ವಿರಾಜ್  ಒತ್ತಾಯಿದ್ದಾರೆ. ಚಿತ್ರೀಕರಣದ ಸ್ಥಳದಲ್ಲಿನ ಸುರಕ್ಷತೆಯ ಬಗ್ಗೆ ಗಮನ ಹೆರಿಸಬೇಕು. ಏಕರೂಪದ ಮಾರ್ಗಸೂಚಿಯನ್ನು ತಯಾರಿಸಬೇಕು. ತಪ್ಪು ಯಾರೇ ಮಾಡಿದ್ದರೂ ಅವರ ಮೇಲೆ ತನಿಖೆ ಆಗಿ ಶಿಕ್ಷೆಯಾಗಬೇಕು. ಮಹಿಳೆಯರು ಈ ವಿಷ್ಯದಲ್ಲಿ ಸುಳ್ಳು ಹೇಳಿದ್ದರೂ ಅವರಿಗೆ ಶಿಕ್ಷೆ ಆಗಲಿ ಎಂದಿದ್ದಾರೆ. ಆರಂಭಿಕ ಹಂತಗಳಲ್ಲಿ ಕೆಲವು ತಪ್ಪುಗಳು ಆಗಿರಬಹುದು. ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದ ಘಟನೆಗಳ ಬಗ್ಗೆ ಸಂಪೂರ್ಣ ಮತ್ತು ವಿವರವಾದ ತನಿಖೆಯ ಅಗತ್ಯವಿದೆ. ಆರೋಪಿಗಳು ತನಿಖೆಯನ್ನು ಎದುರಿಸಲೇಬೇಕು. ಮತ್ತು ತನಿಖೆ ಎದುರಿಸುವಾಗ ತಮ್ಮ ಸ್ಥಾನದಿಂದ ಕೆಳಗೆ ಇಳಿದಿರಬೇಕು .ಮಲಯಾಳಂ ಸಿನಿಮಾ ರಂಗದ ಗುಂಪುಗಾರಿಕೆಯ ಕುರಿತಂತೆಯೂ ಪೃಥ್ವಿರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಗುಂಪುಗಾರಿಕೆಯನ್ನು ನಾನು ವಿರೋಧಿಸುತ್ತೇನೆ. ಇಂತಹ ಗುಂಪುಗಳು ಯಾವುದೇ ಸಿನಿಮಾ ರಂಗದಲ್ಲಿ ಇರಬಾರದು ಎಂದಿದ್ದಾರೆ. ಹೇಮಾ ಸಮಿತಿ ವರದಿ ಬಿಡುಗಡೆ ಆದ ನಂತರ ಯಾರೂ ಈ ಕುರಿತಂತೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಪೃಥ್ವಿರಾಜ್ ಆಡಿದ ಮಾತೂ ಕೂಡ ವೈರಲ್ ಆಗ್ತಿದೆ. (Malayalam) ಸಿನಿಮಾ ರಂಗದಲ್ಲಿ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಕೇರಳ ಸರಕಾರ, ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಮಹಿಳಾ ಲೈಂಗಿಕ ದೌರ್ಜನ್ಯದ ಕುರಿತಂತೆ ವರದಿ ನೀಡಲು ನ್ಯಾಯಮೂರ್ತಿ ಕೆ ಹೇಮಾ ಸಮಿತಿಯನ್ನು (Hema Report) ರಚಿಸಿತ್ತು. ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಈಗ ಆರ್ಟಿಐ ಮೂಲಕ ವರದಿಯು ಬಹಿರಂಗಗೊಂಡಿದೆ. ವರದಿಯಲ್ಲಿ ಉಲ್ಲೇಖವಾಗಿರೋ ಅಂಶಗಳು ಚಿತ್ರೋದ್ಯಮದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿವೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *