LATEST NEWS
ಪುತ್ತೂರಿನಲ್ಲಿ ಆಟೋ ಓಡಿಸಲು ಹೆಲ್ಮೆಟ್ ಕಡ್ಡಾಯ ?
ಪುತ್ತೂರಿನಲ್ಲಿ ಆಟೋ ಓಡಿಸಲು ಹೆಲ್ಮೆಟ್ ಕಡ್ಡಾಯ ?
ಪುತ್ತೂರು ಜುಲೈ 30: ಪುತ್ತೂರನಲ್ಲಿ ಹಲ್ಮೆಟ್ ಧರಿಸಿ ಆಟೋ ಚಲಾಯಿಸಬೇಕೆಂಬ ಕಾನೂನನ್ನು ಪೊಲೀಸರು ಜಾರಿಗೊಳಿಸದ್ದಾರೆಯೇ ಎನ್ನುವ ಸಂದೇಹ ಮೂಡಿಸಿದ್ದು ಇದಕ್ಕೆ ಸಾಕ್ಷಿಯಾಗಿ ಆಟೋ ಚಾಲಕನ ಮೇಲೆ ಹೆಲ್ಮೆಟ್ ಹಾಕದೇ ಆಟೋ ಚಲಾವಣೆ ಮಾಡಿದ್ದಕ್ಕೆ ಪೊಲೀಸರು ದಂಡ ವಿಧಿಸಿದ್ದಾರೆ.
ಇನ್ನು ಮುಂದೆ ಪುತ್ತೂರು ನಗರದಲ್ಲಿ ಅಟೋ ಚಲಾಯಿಸುವ ಚಾಲಕರೂ ಹೆಲ್ಮೆಟ್ ಧರಿಸಬೇಕೆಂಬ ಹೊಸ ನಿಯಮವೊಂದನ್ನು ಪುತ್ತೂರು ಪೋಲೀಸರು ಜಾರಿಗೊಳಿಸಿದ್ದಾರೆಯೇ ಎನ್ನುವ ಗೊಂದಲ ಮೂಡುವಂತಹ ವಿದ್ಯಾಮಾನವೊಂದು ಬೆಳಕಿಗೆ ಬಂದಿದೆ. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಅಟೋ ಒಂದನ್ನು ನಿಲ್ಲಿಸಿದ ಪುತ್ತೂರು ಪೋಲೀಸರು ಮಿತಿಗಿಂತ ಹೆಚ್ಚು ಮಕ್ಕಳನ್ನು ಅಟೋದಲ್ಲಿ ತುಂಬಿಸಿದ್ದಕ್ಕೆ ಕೇಸು ಹಾಕುವುದರ ಜೊತೆಗೆ ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿದ್ದಕ್ಕೂ ಕೇಸು ಹಾಕಿದ್ದಾರೆ.
ಪೋಲೀಸರು ನೀಡಿದ ಈ ನೋಟೀಸ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ. ಕಣ್ತಪ್ಪಿನಿಂದ ಈ ಅಚಾತುರ್ಯ ನಡೆದಿದೆ ಎನ್ನುವ ಸಮಜಾಯಿಷಿ ಪೋಲೀಸರು ನೀಡಿ ನೋಟೀಸಲ್ಲಿ ಮಾರ್ಪಾಡು ಮಾಡಿದ್ದರೂ, ಜಾಲತಾಣಗಳಲ್ಲಿರುವ ನೋಟೀಸನ್ನು ಹೇಗೆ ಸರಿಪಡಿಸುತ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ.