LATEST NEWS
ಉಕ್ರೇನ್ ಹೆಲಿಕಾಪ್ಟರ್ ಪತನ – ಸಚಿವ ಸೇರಿ 16 ಮಂದಿ ಬಲಿ

ಕೀವ್: ಯುದ್ದ ಪೀಡಿತ ಉಕ್ರೇನ್ ನಲ್ಲಿ ಹೆಲಿಕಾಪ್ಟರ್ ಒಂದು ಪತನಗೊಂಡಿದ್ದು, ಉಕ್ರೇನ್ ನ ಸಚಿವರು ಸೇರಿದಂತೆ 16 ಮಂದಿ ಸಾವನಪ್ಪಿದ್ದಾರೆ.
ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪತನಗೊಂಡ ಹೆಲಿಕಾಪ್ಟರ್ ಶಿಶುವಿಹಾರ ಕೇಂದ್ರದ ಮೇಲೆ ಬಿದ್ದಿದ್ದು ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಉಕ್ರೇನ್ ಸಚಿವರ ಜೊತೆ ಹಲವು ಹಿರಿಯ ಅಧಿಕಾರಿಗಳು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಕಟ್ಟಡದ ಮೇಲೆ ಹೆಲಿಕಾಪ್ಟರ್ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವು ಮಕ್ಕನ್ನು ಆಸಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ 10 ಮಕ್ಕಳು ಸೇರಿದಂತೆ 22 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.