LATEST NEWS
ಭಾರಿ ಮಳೆ ಸಂಭವ ಜೂನ್ 8 ರಂದು ಹೈ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಭಾರಿ ಮಳೆ ಸಂಭವ ಜೂನ್ 8 ರಂದು ಹೈ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಮಂಗಳೂರು ಜೂನ್ 6: ಕರ್ನಾಟಕ ಕರಾವಳಿಯಲ್ಲಿ ಜೂನ್ 8 ರಂದು ಬಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಕೇಂದ್ರ ಹವಾಮಾನ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿಗರಲ್ಲಿ ಮತ್ತೇ ಮಹಾಮಳೆಯ ಅತಂಕ ಸೃಷ್ಠಿಯಾಗಿದೆ.
ಈ ಕುರಿತಂತೆ ಕೇಂದ್ರ ಹವಾಮಾನ ಇಲಾಖೆ ರಾಜ್ಯ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದು ಜೂನ್ 8 ರಂದು ಕರ್ನಾಟಕದ ಕರಾವಳಿಯಲ್ಲಿ ಎಚ್ಚರವಹಿಸುವಂತೆ ತಿಳಿಸಿದೆ.
ಹವಾಮಾನ ಇಲಾಖೆಯ ಸೂಚನೆಯಂತೆ ಜೂನ್ 8 ರಂದು ದಕ್ಷಿಣ ಕನ್ನಡ , ಉಡುಪಿ ಹಾಗು ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದ್ದು, 60 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಒಂದು ಅಂದಾಜಿನ ಪ್ರಕಾರ ಜೂನ್ 8 ರಂದು ಈ ಮೂರು ಜಿಲ್ಲೆಗಳಿಲ್ಲಿ 65 ಮಿಮಿ ನಿಂದ 115 ಮಿಮಿ ವರೆಗೆ ಭಾರೀ ಮಳೆ ಸುರಿಯಲಿದೆ. ಸಮುದ್ರದ ಮಟ್ಟದಲ್ಲಿ ಏರಿಕೆ ಯಾಗುವ ಆತಂಕವಿದ್ದು, ಕಡಲ ತೀರದಲ್ಲಿ ವಾಸಿಸುವವರು ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಅಲ್ಲದೆ ಮೀನುಗಾರರು ಕಡಲಿಗೆ ಇಳಿಯದಂತೆ ಆದೇಶ ಹೊರಡಿಸಲಾಗಿದೆ.

ಕರಾವಳಿಗೆ ಈಗಾಗಲೇ ಮುಂಗಾರು ಮಾರುತಗಳ ಪ್ರವೇಶವಾಗಿರುವ ಹಿನ್ನಲೆಯಲ್ಲಿ ಹವಮಾನ ಇಲಾಖೆ ಜೂನ್ 6 ರಿಂದ 10 ರವರೆಗೆ ಭಾರಿ ಮಳೆಯ ಮುನ್ಸೂಚನೆಯನ್ನು ಈಗಾಗಲೇ ನೀಡಿದ್ದರು. ಆದರೆ ಈಗ ಹವಾಮಾನ ಇಲಾಖೆ ಜೂನ್ 8 ರಂದು ಮಹಾಮಳೆ ಸುರಿಯುವ ಎಚ್ಚರಿಕೆ ನೀಡಿದೆ.
ಈ ನಡುವೆ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ ಪರಿಣಾಮ ಕರಾವಳಿಯ ಅದರಲ್ಲೂ ಮಂಗಳೂರಿಗರಲ್ಲಿ ಭಯ ಸೃಷ್ಟಿಸಿದೆ. ಕಳೆದ ಮೇ 29 ರಂದು ಮಂಗಳೂರಿನಲ್ಲಿ ಸುರಿದ ಮಹಾಮಳೆಗೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಇತರ ಭಾಗ ಗಳು ತತ್ತರಿಸಿದ್ದವು. ಮಂಗಳೂರಿನ ಬಹುತೇಕ ಭಾಗದಲ್ಲಿ ಮಳೆನೀರು ತುಂಬಿ ಪ್ರವಾಹ ಪರಿಸ್ಥತಿ ನಿರ್ಮಾಣವಾಗಿತ್ತು. ಸರಿಸುಮಾರು 6 ಗಂಟೆಗಳಕಾಲ ನಿರಂತರವಾಗಿ ಸುರಿದ ಮಹಾಮಳೆ ಮಂಗಳೂರಿನ ಜನ ಜೀವನ ಅಸ್ತವ್ಯಸ್ತ ಮಾಡಿತ್ತು. ನಾಲೆ, ಚರಂಡಿ, ಕಾಲುವೆ ಗಳು ಉಕ್ಕಿ ರಸ್ತೆಮೇಲೆ ಹರಿದ ಪರಿಣಾಮ ಜನಜೀವನವೇ ಸ್ಥಬ್ದಗೊಂಡಿತ್ತು.