LATEST NEWS
ಕರಾವಳಿಯಲ್ಲಿ ಚುರುಕುಗೊಂಡ ಮಳೆ…48 ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ

ಭಾರಿ ಮಳೆ ಗಾಳಿಗೆ ಮರಬಿದ್ದು ಹಲವೆಡೆ ಆಸ್ತಿಪಾಸ್ತಿಗೆ ಹಾನಿ
ಮಂಗಳೂರು ಜೂನ್ 12: ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ ಹಾಗೂ ಉಡುಪಿಯಲ್ಲಿ ಮುಂಗಾರು ಚುರುಕುಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಉತ್ತಮ ಮಳೆಯಾಗಿದೆ. ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ, ಧರ್ಮಸ್ಥಳ, ಬಂಟ್ವಾಳ. ವಿಟ್ಲ, ಸುಳ್ಯ, ಸುರತ್ಕಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
ಇನ್ನು ಕರಾವಳಿಯಲ್ಲಿ ಸುರಿಯುತ್ತಿರುವ ಮಳೆ ಅವಾಂತರಗಳನ್ನು ಸೃಷ್ಠಿಸಿದ್ದು. ನಿನ್ನೆ ಸುರಿದ ಗಾಳಿ ಮಳೆಗೆ ಹಲವೆಡೆ ಹಾನಿಯುಂಟಾಗಿದೆ. ಮಂಗಳೂರಿನ ಬೆಂಗ್ರೆಯ ಅಳಿವೆಬಾಗಿಲು ಬಳಿ, ರಾಣಿ ಅಬ್ಬಕ್ಕ ಪಾರ್ಕ್ ಹತ್ತಿರ ಇರುವ ಶ್ರೀಮತಿ ಶಾರದ ಅಂಗಾರ ಮೆಂಡನ್ ಇವರ ಮನೆಗೆ ನಿನ್ನೆ ಬೀಸಿದ ಬಲವಾದ ಗಾಳಿಗೆ ತೆಂಗಿನ ಮರ ಬಿದ್ದು ಮನೆಯು ಭಾಗಶಃ ಜಖಂ ಆಗಿದೆ.

ಇನ್ನು ಉಡುಪಿ ಜಿಲ್ಲೆಯಲ್ಲೂ ಭಾರಿ ಮಳೆ ಸುರಿಯುತ್ತಿದೆ. ಇಂದು ಬೆಳಿಗ್ಗೆಯಿಂದಲೇ ಭಾರಿ ಗಾಳಿ ಜೊತೆ ಮಳೆ ಸುರಿದಿದೆ. ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.