LATEST NEWS
ಕರಾವಳಿಯಲ್ಲಿ ಮತ್ತೆ ಮಳೆ… ಸೆಪ್ಟೆಂಬರ್ 21 , 22ರಂದು ರೆಡ್ ಅಲರ್ಟ್

ಮಂಗಳೂರು ಸೆಪ್ಟೆಂಬರ್ 18 : ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಮತ್ತೆ ಮುಂದಿನ 5 ದಿನ ಮಳೆಯಾಗಲಿದ್ದು, ಕರಾವಳಿಯಲ್ಲಿ ಸೆಪ್ಟೆಂಬರ್ 21 ಹಾಗೂ 22 ರಂದು ಭಾರಿ ಮಳೆ ಸುರಿಯಲಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಈಗಾಗಲೇ ವಾರದ ಹಿಂದೆ ಸುರಿದ ಮಳೆ ಮಂಗಳೂರು ಸಂಪೂರ್ಣ ಜಲಾವೃತವಾಗಿತ್ತು. ಈಗ ಮತ್ತೆ ಮಳೆಯ ಅಬ್ಬರದ ವಾರ್ನಿಂಗ್ ಅನ್ನು ಹವಮಾನ ಇಲಾಖೆ ನೀಡಿದ್ದು ಅತಂಕ ಮೂಡಿಸಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಸೆಪ್ಟೆಂಬರ್ 19ರಂದು ಯೆಲ್ಲೋ, ಸೆಪ್ಟೆಂಬರ್20ರಂದು ಆರೆಂಜ್ ಹಾಗೂ ಸೆಪ್ಟೆಂಬರ್21, 22ರಂದು ಭಾರಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಈ ಅವಧಿಯಲ್ಲಿ 204.5 ಮಿಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಕರಾವಳಿ ತೀರುದದ್ದಕ್ಕೂ ಗಾಳಿ ವೇಗ ಹೆಚ್ಚಿರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಸೂಚನೆ ನೀಡಿದೆ.