LATEST NEWS
ಭಾರಿ ಮಳೆಗೆ ಧರೆಗುರುಳಿದ ಮಂಗಳಾದೇವಿ ದೇವಸ್ಥಾನ ಆವರಣದ ಅಶ್ವತ್ಥ ಮರ
ಭಾರಿ ಮಳೆಗೆ ಧರೆಗುರುಳಿದ ಮಂಗಳಾದೇವಿ ದೇವಸ್ಥಾನ ಆವರಣದ ಅಶ್ವತ್ಥ ಮರ
ಮಂಗಳೂರು ಜೂನ್ 08: ಕರಾವಳಿಯಲ್ಲಿ ಮುಂಜಾನೆಯಿಂದಲೇ ಭಾರಿ ಮಳೆ ಸುರಿಯುತ್ತಿದ್ದು ರಾತ್ರಿ ಸುರಿದ ಗಾಳಿಸಹಿತ ಮಳೆಗೆ ಬೃಹತ್ ಅಶ್ವತ್ಥ ಮರ ಉರುಳಿದ ಬಿದ್ದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ.
ಮಂಗಳೂರಿನ ಪ್ರಸಿದ್ದ ಮಂಗಳಾದೇವಿ ದೇವಸ್ಥಾನದ ಮುಂಭಾಗದಲ್ಲಿರುವ ಬೃಹತ್ ಅಶ್ವತ್ಥ ವೃಕ್ಷ ಏಕಾಏಕಿ ಉರುಳಿ ಬಿದ್ದಿದ್ದು ಈ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿದ್ದ 4 ಮಂದಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರನ್ನು ಸುರೇಖ(63), ಪ್ರವೀಣ್ ಸುವರ್ಣ (49), ನವೀನ್ (45), ತೇಜಸ್ವಿನಿ (20) ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗು ಸ್ಥಳೀಯರು ಸೇರಿದಂತೆ ಪೊಲೀಸರಿಂದ ತೆರವು ಕಾರ್ಯಾಚರಣೆ ನಡೆಸಿದ್ದು ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ .
ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ನೀರು ಅಪಾಯದ ಮಟ್ಟ ತಲುಪಿದೆ. ಬೆಳಗ್ಗೆಯಿಂದ ಮಳೆ ಸತತ ಬೀಳುತ್ತಿದ್ದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ಶನಿವಾರದ ವರೆಗೆ ರಜೆ ಘೋಷಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯು ಕಳೆದ 24 ಗಂಟೆಗಳಲ್ಲಿ ಸರಾಸರಿ 12 ಸೆಂ.ಮೀ ಮಳೆಯಾಗಿದ್ದು, ಮಂಗಳೂರಿನಲ್ಲಿ ಅತ್ಯಧಿಕ 14.4 ಸೆಂ.ಮೀ, ಬಂಟ್ವಾಳದಲ್ಲಿ 12.9, ಪುತ್ತೂರಿನಲ್ಲಿ 12.1 ಹಾಗೂ ಸುಳ್ಯ ಭಾಗದಲ್ಲಿ 12.9 ಸೆಂ.ಮೀ ಮಳೆ ಬಿದ್ದಿದ್ದರೆ, ಬೆಳ್ತಂಗಡಿಯಲ್ಲಿ 8 ಸೆಂ.ಮೀ ಮಳೆಯಾಗಿರುವುದಾಗಿ ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ. ಅಲ್ಲದೆ ಮುಂದಿನ 2 ದಿನಗಳ ಕಾಲ ಹೆಚ್ಚು ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದೆ.