DAKSHINA KANNADA
ಧಾರಾಕಾರ ಮಳೆಗೆ ಕಲ್ಮಕಾರು ಸೇತುವೆಯಲ್ಲಿ ಸಿಕ್ಕಿಕೊಂಡ ಪಿಕಪ್ ವಾಹನ
ಪುತ್ತೂರು ಮೇ 31: ನಿನ್ನೆ ಸಂಜೆ ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ಸೇತುವೆ ಮೇಲೆ ಸಂಚರಿಸುತ್ತಿದ್ದ ಪಿಕಪ್ ವಾಹನವೊಂದು ಹಠಾತ ಏರಿಕೆಯಾದ ಹೊಳೆಯ ನೀರಿಗೆ ಸಿಲುಕಿದ ಘಟನೆ ಸುಬ್ರಹ್ಮಣ್ಯ ಸಮೀಪದ ಕಲ್ಮಕಾರಿನಲ್ಲಿ ನಡೆದಿದೆ.
ನಿನ್ನೆ ಸಂಜೆ ಸುಬ್ರಹ್ಮಣ್ಯ ಪರಿಸದಲ್ಲಿ ಬಾರೀ ಮಳೆಯಾಗಿತ್ತು, ಒಂದೇ ಸಮನೆ ಸುರಿದ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಹೊಳೆಯ ನೀರು ಏರಿಕೆಯಾಗಿತ್ತು. ಈ ನಡುವೆ ಸುಬ್ರಹ್ಮಣ್ಯ ಸಮೀಪದ ಕಲ್ಮಕಾರಿನಲ್ಲಿ ಸುರಿದ ಭಾರೀ ಮಳೆಗೆ ಕಲ್ಮಕಾರು ಹೊಳೆಗೆ ನಿರ್ಮಿಸಲಾದ ಸೇತುವೆ ಮೇಲೆ ಹಠಾತ ಪ್ರವಾಹ ಬಂದಿತ್ತು. ಈ ವೇಳೆ ಸೇತುವೆ ದಾಟುತ್ತಿದ್ದ ಪಿಕಪ್ ವಾಹನವೊಂದು ಸಿಕ್ಕಿಹಾಕಿಕೊಂಡಿತ್ತು. ತೆಂಗಿನಕಾಯಿ ಲೋಡ್ ಮಾಡಿಕೊಂಡು ಹೊಳೆ ದಾಟುತ್ತಿದ್ದ ಪಿಕ್ ಅಪ್ ವಾಹನ ಹೊಳೆಯಲ್ಲಿ ಏಕಾಏಕಿ ನೀರು ಹರಿದ ಪರಿಣಾಮ ಕೊಚ್ಚಿಹೋಗು ಸ್ಥಿತಿಗೆ ತಲುಪಿತ್ತು, ಈ ವೇಳೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ವಾಹನದಿಂದ ತೆಂಗಿನ ಕಾಯಿಯನ್ನು ತೆಗೆದು, ವಾಹನ ಮತ್ತು ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಪ್ರವಾಹದಿಂದಾಗಿ ಕಲ್ಮಕಾರು ಪ್ರದೇಶ ಸಾಕಷ್ಡು ಹಾನಿ ಅನುಭವಿಸಿದೆ.