LATEST NEWS
ಉಡುಪಿಯಲ್ಲಿ ಮುಂಗಾರು ಮಳೆ ಅಬ್ಬರ – ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ಉಡುಪಿ ಜೂನ್ 27: ಉಡುಪಿಯಲ್ಲಿ ಮುಂಗಾರು ಮಳೆ ಬಿರುಸುಗೊಂಡಿದ್ದು, ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕಾಪು, ಮಲ್ಪೆ, ಪಡುಕೆರೆ ಕಡಲ ಕಿನಾರೆ ಪ್ರಕ್ಷುಬ್ಧವಾಗಿದೆ. ಇನ್ನು ಮಲ್ಪೆ ಬೀಚ್ನಲ್ಲಿಯೂ ರಕ್ಕಸ ಗಾತ್ರದ ಅಲೆಗಳು ಅಬ್ಬರಿಸುತ್ತಿರುವ ಹಿನ್ನಲೆ ಕಡಲಿನ ಹತ್ತಿರ ತೆರಳದಂತೆ ಬೀಚ್ ಸಿಬ್ಬಂದಿಗಳು ತಡೆಯುತ್ತಿದ್ದಾರೆ.
ಉಡುಪಿ ಸಿಟಿ ಬಸ್ ಸ್ಟಾಂಡ್ ಬಳಿ ಮಠದ ಬೆಟ್ಟು ಪರಿಸರ ದಲ್ಲಿ ನೂತನವಾಗಿ ಆರಂಭಗೊಂಡ ಗ್ರಹ ಉಪಕರಣಗಳ ಮಳಿಗೆ ಪಕ್ಕದ ಸೈಟಿಗೆ ನೀರು ನುಗ್ಗಿದೆ. ಬ್ರಹ್ಮಾವರದ ಚಾಂತರು ಪ್ರದೇಶ ರೈಲ್ವೆ ಸೇತುವೆ ಕೆಳಗಡೆ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಬೈಲಕೆರೆ ಅದಮಾರು ಮಠದ ಬಳಿಯ ತೋಟದಲ್ಲಿ ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಮನೆಯವರನ್ನು ಸ್ಥಳಾಂತರಿಸಲಾಗಿದೆ.
ರಾತ್ರಿ ಸುರಿದ ವಿಪರೀತ ಮಳೆಗೆ ಮುಂಜಾನೆ ವೇಳೆ ಸುಮಾರು 4 ಮನೆಗಳ ಒಳಗೆ ನೀರು ತುಂಬಿಕೊಂಡಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳೀಯರನ್ನು ರಕ್ಷಿಸಿದ್ದಾರೆ. ನಾಲ್ಕು ಮನೆಯಲ್ಲಿದ್ದ ಒಟ್ಟು 14 ಮಂದಿಯ ರಕ್ಷಣೆ ಮಾಡಲಾಗಿದೆ.