Connect with us

LATEST NEWS

ಬಿಜೈ – ಕೊರೊನಾ ಲಸಿಕೆಗಾಗಿ ಸೇರಿದ ಭಾರಿ ಜನಸ್ತೋಮ

ಮಂಗಳೂರು ಮೇ 31: ಮಂಗಳೂರಿನ ಬಿಜೈ ಕಾಪಿಕಾಡ್ ಸರ್ಕಾರಿ ಶಾಲೆಯಲ್ಲಿ ಕೊರೊನಾ ಲಸಿಕೆಗಾಗಿ ಭಾರಿ ಜನಸ್ತೋಮ ಸೇರಿದ್ದು, ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾದ ಪರಿಸ್ಥಿತಿ ಬಂದೊದಗಿತ್ತು.
ಇಂದು ಬಿಜೈ ಕಾಪಿಕಾಡ್ ಸರಕಾರಿ ಶಾಲೆಯಲ್ಲಿ ಕೊರೊನಾ ಲಸಿಕೆ ಕಾರ್ಯಕ್ರಮ ಇದ್ದು,ಕೋವ್ಯಾಕ್ಸಿನ್‌ ಲಸಿಕೆಗಾಗಿ ಜನಸ್ತೋಮ ಬೆಳಿಗ್ಗೆ ಸುಮಾರು ಐದು ಗಂಟೆಯಿಂದ ಬಂದು ಸರದಿ ಸಾಲಿನಲ್ಲಿ ನಿಂತಿದ್ದರು.

ಲಸಿಕೆ ಪಡೆಯಲು ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ ಹಿನ್ನೆಲೆ ಜನರನ್ನು ನಿಯಂತ್ರಿಸಲು ಪೊಲೀಸರು ಆಗಮಿಸಬೇಕಾಯಿತು. ಈ ನಡುವೆ ಲಸಿಕೆಗೆ ನಿಯಮಿತ ಟೋಕನ್ ವಿತರಣೆಯಾಗುತ್ತಿದ್ದು, ತಮಗೆ ಬೇಕಾದವರಿಗೆ ಟೋಕನ್ ನೀಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.