DAKSHINA KANNADA
ಪುತ್ತೂರು – ಗಾಳಿ ಮಳೆಗೆ ರಸ್ತೆ ಮೇಲೆ ಬಿದ್ದ ಮೇ ಫ್ಲವರ್ ಮರ
ಪುತ್ತೂರು ಜೂನ್ 09: ಕರಾವಳಿಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಈಗಾಗಲೇ ಜೂನ್ 12 ರವರೆಗೆ ಹೆಚ್ಚು ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣಕನ್ನಡ ಉಡುಪಿ ಜಿಲ್ಲೆಯಲ್ಲೂ ಮಳೆ ಅಬ್ಬರ ಜೋರಾಗಿದೆ.
ರಾಜ್ಯದ ಉದ್ದಗಲಕ್ಕೂ ಮುಂಗಾರು ವ್ಯಾಪಿಸಿದ್ದು ಎಲ್ಲೆಡೆ ಮಳೆ ಆರ್ಭಟ ಶುರುವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜೂನ್ 8 ರಿಂದ 12ರವರೆಗೂ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಕರಾವಳಿಯಲ್ಲೂ ಮಳೆ ಅಬ್ಬರಿಸುತ್ತಿದ್ದು. ಗಾಳಿ ಜೊತೆ ಮಳೆಯಾಗುತ್ತಿದೆ. ಈ ನಡುವೆ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಪುತ್ತೂರಿನಲ್ಲಿ ಭಾರೀ ಮಳೆಗೆ ಮೇ ಫ್ಲವರ್ ಮರವೊಂದು ಬಿದ್ದ ಘಟನೆ ಪುತ್ತೂರಿನ ಬಪ್ಪಳಿಗೆ ಎಂಬಲ್ಲಿ ನಡೆದಿದೆ. ಜನನಿಬಿಡ ಪ್ರದೇಶದಲ್ಲೇ ಇದ್ದ ಭಾರೀ ಗಾತ್ರದ ಮರ ರಸ್ತೆ ಮೇಲೆ ಬಿದ್ದು ಎದುರಿನ ಮನೆಯೊಂದರ ಕಂಪೌಂಡ್ ಗೆ ಹಾನಿಯಾಗಿದೆ. ಮರ ಬಿದ್ದ ಪರಿಣಾಮ ವಿಟ್ಲ-ಬಲ್ನಾಡ್ ಆಗಿ ಪುತ್ತೂರಿಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಬ್ಲಾಕ್ ಆಗಿದೆ. ಮರ ಬಿದ್ದ ಪರಿಣಾಮ ವಾಹನ ಸವಾರರ ಸಂಕಷ್ಟ ಸಿಲುಕಿದ್ದಾರೆ.