LATEST NEWS
ಬೇಸಿಗೆಯ ಆರಂಭದಲ್ಲೇ ಕರಾವಳಿ ಕರ್ನಾಟಕದಲ್ಲಿ ಬಿಸಿಗಾಳಿ ಎಚ್ಚರಿಕೆ

ಮಂಗಳೂರು ಫೆಬ್ರವರಿ 26: ಬೇಸಿಗೆ ಪ್ರಾರಂಭದಲ್ಲೇ ಕರಾವಳಿಯಲ್ಲಿ ಬಿಸಿ ಅಬ್ಬರ ಜೋರಾಗಿದೆ. ಬೇಸಿಗೆ ಪ್ರಾರಂಭದಲ್ಲೇ ಹವಮಾನ ಇಲಾಖೆ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಬಿಸಿಗಾಳಿ/ ಯಲ್ಲೋ ಎಚ್ಚರಿಕೆಯನ್ನು ನೀಡಿದ್ದು, ತಾಪಮಾನದಲ್ಲಿ ಗಣನೀಯ ಏರಿಕೆಯಾಗುವ ಎಚ್ಚರಿಕೆಯನ್ನು ನೀಡಿದೆ.
ಫೆಬ್ರವರಿ 26 ಮತ್ತು 27 ರಂದು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣದ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ಗರಿಷ್ಠ ತಾಪಮಾನವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಹವಮಾನ ಇಲಾಖೆ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದ್ದು, ಇಂದು ಮತ್ತು ನಾಳೆ ಬಿಸಿ ಮತ್ತು ಆರ್ದ್ರ ವಾತಾವರಣದ ಎಚ್ಚರಿಕೆಯನ್ನು ನೀಡಿದೆ. ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಒತ್ತಾಯಿಸಿದ್ದಾರೆ.
ಅನುಸರಿಸಬೇಕಾದ ಕ್ರಮಗಳು
- ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಇರಿ
- ಬಿಸಿಲಿನ ಅವಧಿಯಲ್ಲಿ ಕೊಡೆಗಳನ್ನು ಬಳಸಿ
- ಸಾಧ್ಯವಾದಷ್ಟು ಹತ್ತಿಯ ಉಡುಪುಗಳನ್ನು ಧರಿಸಿ
- ಕಾಟನ್ ಟೋಪಿಗಳನ್ನು ಬಳಸಿ
- ಹೆಚ್ಚಿನ ಬಿಸಿಲು ಅವಧಿಯಲ್ಲಿ ವಿಶ್ರಾಂತಿ ಪಡೆಯಿರಿ
- ಸಾಕಷ್ಟು ನೀರು, ಮಜ್ಜಿಗೆ ಕುಡಿಯಿರಿ
- ವಾಸವಿರುವ ಕೋಣೆಯನ್ನು ತಂಪಾಗಿರಿಸಿ
- ಬಿಸಿಗಾಳಿಗೆ ತುತ್ತಾದ ವ್ಯಕ್ತಿಯನ್ನು ಕೂಡಲೇ ತಂಪಾದ ಸ್ಥಳಕ್ಕೆ ರವಾನಿಸಿ
- ಬಿಸಿಗಾಳಿಗೆ ತುತ್ತಾದ ವ್ಯಕ್ತಿಗೆ ಕೂಡಲೇ ಚಿಕಿತ್ಸೆ ನೀಡಿ
- ಬಿಸಿಗಾಳಿಗೆ ತುತ್ತಾದವರಿಗೆ ಸಾಕಷ್ಟು ಕುಡಿಯುವ ನೀರು, ಮಜ್ಜಿಗೆ, ದ್ರವಾಹಾರ ನೀಡಿ
- ನೇರ ಬಿಸಿಲು/ಬಿಸಿಗಾಳಿಗೆ ಒಡ್ಡಿಕೊಳ್ಳಬೇಡಿ
- ಬಿಸಿಲಿನ ಅವಧಿಯಲ್ಲಿ ಕೊಡೆ ಇಲ್ಲದೆ ಹೊರಗೆ ಹೋಗಬೇಡಿ
- ಕಪ್ಪು/ಗಾಢ ಬಣ್ಣದ ತೆಳುವಾದ ಹಾಗೂ ಸಿಂಥಟಿಕ್ ಉಡುಪುಗಳನ್ನು ಧರಿಸಬೇಡಿ
- ನೇರವಾಗಿ ಬಿಸಿಲಿನ ಝಳಕ್ಕೆ ತಲೆ ಒಡ್ಡಬೇಡಿ
- ಹೆಚ್ಚಿನ ಬಿಸಿಲು ಇರುವ ಅವಧಿಯಲ್ಲಿ ಶ್ರಮದಾಯಕ, ದೈಹಿಕ ಕೆಲಸಗಳನ್ನು ಮಾಡಬೇಡಿ
- ಬಿಸಿ ಚಹಾ, ಮದ್ಯ ಸೇವಿಸಬೇಡಿ
- ವಾಸವಿರುವ ಕೋಣೆಯಲ್ಲಿ ನೇರವಾಗಿ ಬಿಸಿಲು ಬೀಳುವುದನ್ನು ತಪ್ಪಿಸಿ
- ಬಿಸಿಗಾಳಿಗೆ ತುತ್ತಾದ ವ್ಯಕ್ತಿಯನ್ನು ಕೂಡಲೇ ತಂಪಾದ ಸ್ಥಳಕ್ಕೆ ರವಾನಿಸಿ
- ಬಿಸಿಗಾಳಿಗೆ ತುತ್ತಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡುವುದನ್ನು ತಡಮಾಡಬೇಡಿ
- ಬಿಸಿಗಾಳಿ ಸಂದರ್ಭಗಳಲ್ಲಿ ಚಹಾ, ಕಾಫಿ ಮತ್ತು ಜೇನು ಸೇವಿಸಬೇಡಿ