FILM
ಹೃದಯಾಘಾತಕ್ಕೆ ಬಲಿಯಾದ ಫಿಟ್ನೆಸ್ ಮಾಡೆಲ್ ಲಾರಿಸ್ಸಾ ಬೋರ್ಗೆಸ್

ಬ್ರೆಜಿಲ್ ಅಗಸ್ಟ್ 31: ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಬಗ್ಗೆ ವಿಡಿಯೋ ಮಾಡಿ ಖ್ಯಾತಿ ಪಡೆದಿದ್ದ ಮಾಡೆಲ್ ಲಾರಿಸ್ಸಾ ಬೋರ್ಗೆಸ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಆಕೆಗೆ 33 ವರ್ಷ ವಯಸ್ಸಾಗಿತ್ತು, ಬ್ರೆಜಿಲಿಯನ್ ಫಿಟ್ನೆಸ್ ಪ್ರಭಾವಿ ಆಗಿದ್ದ ಲಾರಿಸ್ಸಾ ಬೋರ್ಗೆಸ್ ಬ್ರೆಜಿಲ್‌ನ ಗ್ರಾಮಡೊ ನಗರದಲ್ಲಿ ಪ್ರಯಾಣಿಸುತ್ತಿದ್ದಾಗ ಮೊದಲ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು.

ಬಳಿಕ ಕೋಮಾಕ್ಕೆ ಜಾರಿದ್ದ ಅವರು, ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಮತ್ತೆ ಎರಡನೇ ಬಾರಿ ಹಾರ್ಟ್ ಅಟ್ಯಾಕ್ ಆದ ಹಿನ್ನಲೆ ಅವರು ಸಾವನಪ್ಪಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.