LATEST NEWS
ಹೃದಯಾಘಾತದಿಂದಾಗಿ ಮಣಿಪಾಲದ ಆರ್ವಿ ಟೂರ್ಸ್ ಎಂಡ್ ಟ್ರಾವೆಲ್ಸ್ ಮಾಲಕ ರಾಘವೇಂದ್ರ ಭಂಡಾರಿ ನಿಧನ

ಉಡುಪಿ ಫೆಬ್ರವರಿ 20: ಹೃದಯಾಘಾತದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಣಿಪಾಲದ ಆರ್ವಿ ಟೂರ್ಸ್ ಎಂಡ್ ಟ್ರಾವೆಲ್ಸ್ ಮಾಲಕ ರಾಘವೇಂದ್ರ ಭಂಡಾರಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.
ಬಂಟ್ವಾಳದ ವಿಟ್ಲದ ಮಾಜಿ ಸೈನಿಕ ಕೆ.ಎನ್. ಶಾಂಭ ಭಂಡಾರಿಯವರ ಪುತ್ರ ರಾಘವೇಂದ್ರ ಅವರು ಕಳೆದ 15 ವರ್ಷಗಳಿಂದ ಮಣಿಪಾಲದಲ್ಲಿ ಟ್ರಾವೆಲ್ಸ್ ಉದ್ಯಮ ನಡೆಸುತ್ತಿದ್ದರು. ಪರ್ಕಳ ಸಮೀಪದ ಅಚ್ಚುತನಗರ ಗ್ಯಾಡ್ಸನ್ ನಿವಾಸಿ ಕೆ. ರಾಘವೇಂದ್ರ ಭಂಡಾರಿ ಅವರಿಗೆ ಹೃದಯಾಘಾತವಾಗಿತ್ತು. ಈ ಹಿನ್ನಲೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.
