KARNATAKA
ತಮ್ಮನ ಮೃತದೇಹ ನೋಡಿ ಹೃದಯಾಘಾತಕ್ಕೆ ಅಣ್ಣ ಬಲಿ….!!

ಹಾಸನ ಅಕ್ಟೋಬರ್ 08: ನೀರಿನಲ್ಲಿ ಮುಳುಗಿ ಸಾವನಪ್ಪಿದ ತಮ್ಮನ ಮೃತದೇಹ ನೋಡಿ ಅಣ್ಣನು ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.

Man drowning in the water
ಅರಸೀಕೆರೆ ತಾಲ್ಲೂಕಿನ ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವನಪ್ಪಿದ್ದರು, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ (28), ಆಟೋ ಚಾಲಕನಾಗಿದ್ದ ರಾಜ. (30) ಮೃತಪಟ್ಟ ಯುವಕರು.

ಗುರುವಾರ ರಾತ್ರಿ ಗಣಪತಿ ವಿಸರ್ಜನೆ ವೇಳೆ ಕೆರೆಗೆ ಇಳಿದಿದ್ದ ಇಬ್ಬರು, ಈಜು ಬಾರದ್ದರಿಂದ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತಪಟ್ಟ ರಾಜ ಅವರ ಅಣ್ಣ ಮಧು (37) ಬೆಂಗಳೂರಿನಿಂದ ಬಂದಿದ್ದು, ತಮ್ಮನ ಶವ ನೋಡಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೃತದೇಹಗಳನ್ನು ನಗರದ ಹಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸ್ಥಳಕ್ಕೆ ಗಂಡಸಿ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದು, ದೂರು ದಾಖಲಿಸಿದ್ದಾರೆ.