Connect with us

    LATEST NEWS

    ಮೂಡುಬಿದಿರೆ – ಕೆಲಸಕ್ಕೆ ಹೋಗುತ್ತಿದ್ದ ವೇಳೆ ಹೃದಯಾಘಾತಕ್ಕೆ ಬಲಿಯಾದ ಕಲ್ಲಮುಂಡ್ಕೂರು ಗ್ರಾಮಪಂತಾಯತ್ ಸಿಬಂದಿ ಚಂದ್ರಹಾಸ

    ಮೂಡುಬಿದಿರೆ ಜನವರಿ 07 : ಕರ್ತವ್ಯಕ್ಕೆ ಹಾಜರಾಗಲು ನಡೆದುಕೊಂಡು ಬರುತ್ತಿದ್ದ ಕಲ್ಲಮುಂಡ್ಕೂರು ಗ್ರಾ.ಪಂ. ಸಿಬಂದಿ ಚಂದ್ರಹಾಸ (29) ಹೃದಯಾಘಾತದಿಂದ ನಿಧನರಾದ ಘಟನೆ ಶನಿವಾರ ನಡೆದಿದೆ.


    ಚಂದ್ರಹಾಸ ಕಲ್ಲಮುಂಡ್ಕೂರು ಗ್ರಾ.ಪಂ. ವ್ಯಾಪ್ತಿಯ ಬರ್ಕಬೆಟ್ಟು ನಿವಾಸಿಯಾಗಿದ್ದು, ಮನೆಯಿಂದ ನೂರು ಮೀಟರ್‌ ದೂರದಲ್ಲಿ ಕುಸಿದು ಬಿದ್ದ ಚಂದ್ರಹಾಸ ಅವರನ್ನು ಮೂಡುಬಿದಿರೆ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅದಾಗಲೇ ಅವರು ಕೊನೆಯುಸಿರೆಳೆದಿದ್ದರು.
    ಕಳೆದ 10 ವರ್ಷಗಳಿಂದ ಪಂಚಾ ಯತ್‌ನಲ್ಲಿ ಸಿಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅತ್ಯುತ್ತಮ ಕ್ರಿಕೆಟ್‌ ಆಟಗಾರರಾಗಿದ್ದ ಚಂದ್ರಹಾಸ್‌ ಅವರು ಸ್ಥಳೀಯ ಕೆಎಫ್‌ಸಿ ತಂಡದ ಸದಸ್ಯರಾಗಿದ್ದರು. ಅಲ್ಲದೆ ಉತ್ತಮ ಚಿತ್ರಕಲಾವಿದರೂ ಆಗಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *