LATEST NEWS
ಶಿವತಾಂಡವ ನೃತ್ಯದ ವೇಳೆ ಹೃದಯಾಘಾತಕ್ಕೆ ಬಲಿಯಾದ ಕಲಾವಿದ

ಜಮ್ಮು ಸೆಪ್ಟೆಂಬರ್ : ಶಿವ ತಾಂಡವ ನೃತ್ಯ ಪ್ರದರ್ಶನ ವೇಳೆ ಪಾರ್ವತಿ ಪಾತ್ರದಾರಿ ಕಲಾವಿದ ವೇದಿಕೆ ಮೇಲೆಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಜಮ್ಮು ನಗರದ ಹೊರವಲಯದಲ್ಲಿ ನಡೆದಿದೆ. ಅವರ ಕೊನೆಯ ಕ್ಷಣಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕಲಾವಿದನನ್ನು 20 ವರ್ಷದ ಯೋಗೇಶ್ ಗುಪ್ತಾ ಎಂದು ಗುರುತಿಸಲಾಗಿದ್ದು, ಬಿಷ್ನಾ ತೆಹಿಲ್‌ನ ಕೋಥಾ ಸೋನಿಯಾ ಕುಗ್ರಾಮದಲ್ಲಿ ಮಂಗಳವಾರ ರಾತ್ರಿ ಜಾಗರಣೆ ಸಂದರ್ಭದಲ್ಲಿ ಶಿವ ತಾಂಡವ ಪ್ರದರ್ಶನದ ನೃತ್ಯ ಮಾಡುತ್ತಿದ್ದಂತೆಯೇ ವೇದಿಕೆ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರೇಕ್ಷಕರ ಚಪ್ಪಾಳೆ ನಡುವೆ ನೃತ್ಯ ಪ್ರದರ್ಶಿಸುತ್ತಿದ್ದ ಯೋಗೇಶ್ ವೇದಿಕೆ ಮೇಲೆ ಬಿದಿದ್ದು, ಮತ್ತೆ ಮೇಲೇಳಲು ಸಾಧ್ಯವಾಗಿಲ್ಲ. ತೀವ್ರ ಪ್ರಯತ್ನದ ಹೊರತಾಗಿಯೂ ಅವರು ಎದ್ದೇಳಲು ವಿಫಲರಾದ ಕಾರಣ ಶಿವನ ಪಾತ್ರವನ್ನು ನಿರ್ವಹಿಸುತ್ತಿದ್ದ ನಟ ಮತ್ತಿತರರು ವೇದಿಕೆಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ, ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.