LATEST NEWS
ಪಬ್ ಜಿ ಗೇಮ್… ಕಿವಿಯಲ್ಲಿ ಇಯರ್ ಪೋನ್..ರೈಲು ಬಂದಿದ್ದೆ ಗೊತ್ತಾಗಲಿಲ್ಲ.. ಈ ಮೂವರು ಹುಡುಗರಿಗೆ
ಪಾಟ್ನಾ ಜನವರಿ 03: ಕಿವಿಯಲ್ಲಿ ಇಯರ್ ಪೋನ್ ಇಟ್ಕೊಂಡು, ಮೊಬೈಲ್ ನಲ್ಲಿ ಪಬ್ ಜಿ ಗೇಮ್ ಆಡುತ್ತಾ ರೈಲಿನ ಟ್ರ್ಯಾಕ್ ಮೇಲೆ ಕುಳಿತಿದ್ದ ಮೂವರು ಹುಡುಗರ ಮೇಲೆ ರೈಲೊಂದು ಹರಿದ ಪರಿಣಾಮ ಮೂವರು ಸಾವನಪ್ಪಿದ ಘಟನೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಸಮೀರ್ ಆಲಂ (16), ಫುರ್ಖಾನ್ ಆಲಂ (15) ಮತ್ತು ಸದಾಬ್ (14) ಎಂದು ಗುರುತಿಸಲಾಗಿದೆ. ಮೂವರು ಸ್ನೇಹಿತರು, ಬೆಟ್ಟಿಯಾ ಪಟ್ಟಣದ ಅಂಚಿನಲ್ಲಿರುವ ಮನ್ಸಾರೌತ್ ಟೋಲಾ ಕ್ರಾಸಿಂಗ್ ಬಳಿ ರೈಲ್ವೆ ಹಳಿಗಳ ಮೇಲೆ ವಿಡಿಯೋ ಗೇಮ್ ಆಡುತ್ತಿದ್ದಾಗ ರೈಲಿಗೆ ಸಿಕ್ಕಿ ಸಾವನಪ್ಪಿದ್ದಾರೆ.
ಈ ಮೂವರು ಸ್ನೇಹಿತರು ಕಿವಿಗೆ ಇಯರ್ ಪೋನ್, ಹಾಕಿಕೊಂಡು ರೈಲ್ವೆ ಹಳಿ ಮೇಲೆ ಕುಳಿತು ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದರು, ಈ ವೇಳೆ ಅದೇ ಮಾರ್ಗದಲ್ಲಿ ಬಂದ ಮುಜಾಫರ್‌ಪುರದಿಂದ ನರ್ಕಟಿಯಾಗಂಜ್ ಕಡೆಗೆ ತೆರಳುತ್ತಿದ್ದ ಎಂಇಎಂಯು ರೈಲು ಡಿಕ್ಕಿ ಹೊಡೆದಿದೆ. ರೈಲು ಲೋಕೋಪೈಲೆಟ್ ಬಾಲಕರು ಹಳಿ ಮೇಲೆ ಕುಳಿತಿದ್ದನ್ನು ನೋಡಿದ್ದು, ಹಾರ್ನ್ ಹಾಕಿದ್ದಾರೆ. ಅಲ್ಲದೆ ಅಲ್ಲೆ ಸಮೀಪದಲ್ಲಿ ಜನರು ಕೂಡ ಕೂಗಿದ್ದಾರೆ ಆದರೂ ಕಿವಿಯಲ್ಲಿ ಇಯರ್ ಪೋನ್ ಹಾಕಿ ಆಟದಲ್ಲಿ ಮಗ್ನರಾಗಿದ್ದ ಹುಡುಗರಿಗೆ ಕೇಳಲೆ ಇಲ್ಲ. ಕೊನೆಗೆ ರೈಲು ಅವರ ಮೇಲೆ ಹರಿದಿದ್ದು, ಮೂವರು ಪ್ರಾಣ ಬಿಟ್ಟಿದ್ದಾರೆ.