LATEST NEWS
ನಾನು ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದ್ದೇನೆ ಆದರೆ ಬಟ್ಟೆ ನನ್ನಿಷ್ಟ ಎಂದ ಬಿಕಿನಿ ಗರ್ಲ್
ದೆಹಲಿ ಎಪ್ರಿಲ್ 05: ದೆಹಲಿ ಮೆಟ್ರೋ ದಲ್ಲಿ ಬಿಕಿನಿ ಧರಿಸಿ ಸಂಚರಿಸುತ್ತಿದ್ದ ಹುಡುಗಿಯೊಬ್ಬಳು ವಿಡಿಯೋ ವೈರಲ್ ಆದ ಬೆನ್ನಲ್ಲೇ ಯುವತಿಯ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿತ್ತು, ಆದರೆ ಅದಕ್ಕೆ ಕ್ಯಾರೆ ಅನ್ನದ ಹುಡುಗಿ ಇದೀಗ ನಾನು ಏನು ಬೇಕಾದರೂ ಧರಿಸುತ್ತೇನೆ, ಅದು ನನ್ನ ಸ್ವಾತಂತ್ರ್ಯ. ಆದ್ರೆ ನಾನು ಇದನ್ನು ಪ್ರಚಾರಕ್ಕಾಗಿ, ಸ್ಟಂಟ್ ಮಾಡೋಕಾಗಲಿ ಅಥವಾ ಫೇಮಸ್ ಆಗ್ಬೇಕು ಅಂತಾ ಮಾಡಿಲ್ಲ ಎಂದು ಹೇಳಿದ್ದಾಳೆ.
ಎರಡು ದಿನಗಳ ಹಿಂದೆಯಷ್ಟೇ ದೆಹಲಿಯ ಮೆಟ್ರೋದಲ್ಲಿ ಯುವತಿಯೊಬ್ಬಳು ಬಿಕಿನಿ ತೊಟ್ಟು ಓಡಾಡಿದ್ದಳು. ಎನ್‌ಸಿಎಂ ಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ಸುಮಾರು 9 ಸೆಕೆಂಡುಗಳ ವೀಡಿಯೋದಲ್ಲಿ, ಯುವತಿ ಬಿಕಿನಿ ಧರಿಸಿ ಸಂಚರಿಸುತ್ತಿರುವುದು ಕಂಡುಬಂದಿತ್ತು.
ಯುವತಿ ಮೆಟ್ರೋದಲ್ಲಿ ಸಂಚರಿಸುತ್ತಿದ್ದ ವೇಳೆ ತೊಡೆಯ ಮೇಲೆ ಬ್ಯಾಗ್ ಇಟ್ಟುಕೊಂಡು ಕುಳಿತಿದ್ದಳು. ಆಕೆ ಎದ್ದು ನಿಂತಾಗ ಬಿಕಿನಿ ಧರಿಸಿರುವುದು ಕಂಡಿದೆ, ತಕ್ಷಣವೇ ಚಾಲಾಕಿಯೊಬ್ಬ ವೀಡಿಯೋ ಸೆರೆಹಿಡಿದು ಜಾಲತಾಣದಲ್ಲಿ ಹರಿಬಿಟ್ಟಿದ್ದನು. ಆಕೆ ಡ್ರೆಸ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲೆ ಇದೀಗ ಟೀಕಾಕಾರರಿಗೆ ಯುವತಿ ಖಡಕ್ ಉತ್ತರ ಕೊಟ್ಟಿದ್ದು, ನನಗೆ ಈ ರೀತಿ ಮಾಡಬೇಕು ಎಂಬ ಯೋಚನೆ ಬಂದಿದ್ದು ಒಂದು ದಿನದಲ್ಲಿ ಅಲ್ಲ. ನಾನು ಸಹ ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದ್ದೇನೆ. ಅಲ್ಲಿ ನನಗೆ ಬೇಕಾದ್ದನ್ನು ಮಾಡಲು ಅವಕಾಶ ಇರಲಿಲ್ಲ. ಆದ್ದರಿಂದ ಒಂದು ದಿನ ನಾನು ಬಯಸಿದಂತೆ ಇರಬೇಕು ಅಂತಾ ಹೀಗೆ ಮಾಡಿದೆ. ಕೆಲವು ತಿಂಗಳಿನಿಂದ ನಾನು ಹೀಗೆಯೇ ಓಡಾಡುತ್ತಿದ್ದೇನೆ, ಆದ್ರೆ ಈಗ ವೈರಲ್ ಆಗಿದೆ. ದೆಹಲಿ ನೇರಳೆ ಮಾರ್ಗದಲ್ಲಿ ಮಾತ್ರ ನನಗೆ ಪ್ರಯಾಣಿಸಲು ಅನುಮತಿ ನೀಡಲಿಲ್ಲ. ಉಳಿದೆಲ್ಲೂ ಎಲ್ಲೂ ನನಗೆ ಸಮಸ್ಯೆಯಾಗಿಲ್ಲ ಎಂದು 19ರ ಯುವತಿ ಸ್ಪಷ್ಟನೆ ನೀಡಿದ್ದಾಳೆ.
ಈ ಕುರಿತು ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಹೇಳಿಕೆ ಬಿಡುಗಡೆ ಮಾಡಿದ್ದು, ಸಮಾಜದಲ್ಲಿ ಸ್ವೀಕಾರಾರ್ಹವಾಗಿರುವ ಸಾಮಾಜಿಕ ಶಿಷ್ಟಾಚಾರವನ್ನು ಮೆಟ್ರೋದಲ್ಲಿ ಅನುಸರಿಸಬೇಕಾಗುತ್ತದೆ. ಪ್ರಯಾಣಿಕರು ಇತರರ ಸಂವೇಧನೆಗೆ ಧಕ್ಕೆ ತರುವಂತಹ ಉಡುಪುಗಳ್ನು ಧರಿಸಬಾರದು. ಒಂದು ವೇಳೆ ಇನ್ಮುಂದೆ ಅಂತಹ ಸನ್ನಿವೇಶಗಳು ಕಂಡುಬಂದಲ್ಲಿ ಡಿಎಂಆರ್‌ಸಿ ನಿರ್ವಹಣೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 59ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಎಚ್ಚರಿಸಿದೆ.