LATEST NEWS
ಸ್ಕಾರ್ಪ್ ವಿವಾದ – ಕೇಸರಿ ಶಾಲು ಧರಿಸಿ ಬಂದ ವಿಧ್ಯಾರ್ಥಿಗಳು…!!
ಮಂಗಳೂರು ಜನವರಿ 06: ಉಡುಪಿಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಸ್ಕಾರ್ಪ್ ವಿವಾದ ಇದೀಗ ಮತ್ತೊಂದು ರೀತಿಯ ಪ್ರತಿಭಟನೆಗೆ ಕಾರಣವಾಗಿದ್ದು, ಮುಸ್ಲಿಂ ವಿಧ್ಯಾರ್ಥಿನಿಯರು ಸ್ಕಾರ್ಪ್ ಧರಿಸಿ ಬರುವುದಾದರೇ ನಾವು ಕೇಸರಿ ಶಾಲು ಹಾಕಿ ತರಗತಿಗೆ ಹಾಜರಾಗುವುದಾಗಿ ಹಿಂದೂ ವಿಧ್ಯಾರ್ಥಿಗಳು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ಪೊಂಪೈ ಕಾಲೇಜಿನಲ್ಲಿ ಸ್ಕಾರ್ಪ್ ವಿವಾದ ಪ್ರಾರಂಭವಾಗಿದೆ. ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಗಳು ಸ್ಕಾರ್ಪ್ ಹಾಕಿ ತರಗತಿ ಹಾಜರಾದ ಕಾರಣ, ಹಿಂದೂ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಕೇಸರಿ ಶಾಲು ಹಾಕಿ ತರಗತಿ ಹಾಜರಾಗಿದ್ದಾರೆ. ವಿದ್ಯಾರ್ಥಿಗಳು ಸ್ಕಾರ್ಪ್ ವಿಚಾರ ಕುರಿತು ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದು, ಆಡಳಿತ ಮಂಡಳಿ ಸಭೆ ನಡೆದಿದೆ ಎನ್ನಲಾಗಿದೆ.
ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಪ್ ತೆಗೆಯುವ ತನಕ ನಾವು ಕೇಸರಿ ಶಾಲು ತೆಗೆಯುದಿಲ್ಲ. ನಮಗೆ ಹಿಂದು ಸಂಘಟನೆಗಳಾದ ಬಜರಂಗದಳ, ವಿಶ್ವಹಿಂದೂಪರಿಷತ್, ಎಬಿವಿಪಿ ಬೆಂಬಲ ಸೂಚಿಸಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.