LATEST NEWS
ಪಾಕಿಸ್ತಾನಕ್ಕೆ ಭಾರತದ ಬಗ್ಗೆ ಮಾಹಿತಿ ಹಂಚಿಕೆ -ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅರೆಸ್ಟ್

ನವದೆಹಲಿ ಮೇ 17: ಟ್ರಾವೆಲ್ ವಿದ್ ಜೋ ಎಂಬ ಯೂಟ್ಯೂಬ್ ಚಾನೆಲ್ ನ ಜ್ಯೋತಿ ಮಲ್ಹೋತ್ರಾ ಎಂಬಾಕೆಯನ್ನು ಪೊಲೀಸರು ದೇಶದ ವಿರುದ್ದ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಅರೆಸ್ಟ್ ಮಾಡಿದ್ದಾರೆ,
ಹರಿಯಾಣದ ಹಿಸಾರ್ ನಿವಾಸಿ ಹರಿಶ್ ಕುಮಾರ್ ಅವರ ಪುತ್ರಿ ಜ್ಯೋತಿ ಮಲ್ಹೋತ್ರಾ ಅವರನ್ನು ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿ ರವಾನಿಸಿದ ಆರೋಪದಡಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜ್ಯೋತಿ ರಾಣಿ ಅವರು ದೆಹಲಿಯಲ್ಲಿ ಪಾಕ್ ಅಧಿಕಾರಿ ಅಹ್ವಾನ್-ಉರ್-ರಹೀಮ್ ಅವರನ್ನು ಭೇಟಿಯಾಗಿದ್ದರು. ಜತೆಗೆ, ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ ಭಾರತದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿರುವುದು ತಿಳಿದುಬಂದಿದೆ. ಜ್ಯೋತಿ ರಾಣಿ ವಿರುದ್ಧ ವಿವಿಧ ವಿಭಾಗಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈಕೆ ಟ್ರಾವೆಲ್ ವಿದ್ ಜೋ ಎಂಬ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಅದರಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಪಾಲೋವರ್ಸ್ ಇದ್ದಾರೆ. ಇತ್ತೀಚೆಗೆ ಪಾಕಿಸ್ತಾನಕ್ಕೆ ತೆರಳಿದ್ದ ಈಕೆ ಅಲ್ಲಿ ಬ್ಲಾಗ್ ಮಾಡಿದ್ದಳು.
ಜ್ಯೋತಿ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪಾಕಿಸ್ತಾನಕ್ಕೆ ಸಂಬಂಧಿಸಿದ ಅನೇಕ ರೀಲ್‌ಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ. ಪಾಕಿಸ್ತಾನದಲ್ಲಿ ಮಾಡಿದ ಪ್ರವಾಸ ಕಥನಕ್ಕೆ ಸಂಬಂಧಿಸಿದ ರೀಲ್‌ಗಳು ಮತ್ತು ವೀಡಿಯೊಗಳ ಮೂಲಕ, ಜ್ಯೋತಿ ಅಲ್ಲಿ ಅನೇಕ ಸಕಾರಾತ್ಮಕ ವಿಷಯಗಳನ್ನು ತೋರಿಸಲು ಪ್ರಯತ್ನಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಜ್ಯೋತಿ ಅವರು ಸಾಮಾಜಿಕ ಮಾಧ್ಯಮ ವ್ಯಕ್ತಿತ್ವದ ತಮ್ಮ ಪ್ರಭಾವವನ್ನು ಗುಪ್ತಚರ ಮತ್ತು ಪ್ರಚಾರ ಉದ್ದೇಶಗಳಿಗಾಗಿ ವಿದೇಶಿ ಏಜೆಂಟರು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಪಾಕಿಸ್ತಾನಿ ಹೈಕಮಿಷನ್ ಸಿಬ್ಬಂದಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಅವರನ್ನು ಗೂಢಚರ್ಯೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಭಾರತ ಸರ್ಕಾರವು ಮೇ 13, 2025 ರಂದು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಿತು ಮತ್ತು ದೇಶವನ್ನು ತೊರೆಯುವಂತೆ ಆದೇಶಿಸಲಾಯಿತು. ಹರಿಯಾಣ ನಿವಾಸಿ ಜ್ಯೋತಿ, ಅದೇ ಡ್ಯಾನಿಶ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಳು. ಜ್ಯೋತಿ ಮಲ್ಹೋತ್ರಾ ವಿರುದ್ಧ ಭಾರತೀಯ ದಂಡ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 152 ಮತ್ತು 1923 ರ ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 3, 4 ಮತ್ತು 5 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.