Connect with us

    FILM

    ಹೆಣ್ಣು ಮಗುವಿಗೆ ಜನ್ಮ ನೀಡಿದ ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ

    ಬೆಂಗಳೂರು ಅಕ್ಟೋಬರ್ 04: ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್‌ ದಂಪತಿಗೆ ಹೆಣ್ಣು ಮಗು ಜನಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ಪೋಸ್ಟ್ ಮಾಡಿದ್ದಾರೆ.  ಮಗು ಮತ್ತು ತಾಯಿ ಹರ್ಷಿಕಾ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಭುವನ್‌ ತಿಳಿಸಿದ್ದಾರೆ. ಮಗುವಿಗೆ ‘ಚೈಕಾರ್ತಿ’ ಎಂದು ಹೆಸರಿಟ್ಟಿದ್ದಾರೆ.


    ಇತ್ತೀಚೆಗೆ ರವಿವರ್ಮನ ಚಿತ್ರಕಲೆಯನ್ನು ಆಧಾರವಾಗಿಟ್ಟುಕೊಂಡು ಬೇಬಿ ಬಂಪ್‌ ಫೋಟೊ ಶೂಟ್‌ ಮಾಡಿಸಿ ಹರ್ಷಿಕಾ ಸುದ್ದಿಯಾಗಿದ್ದರು. ಕಳೆದ ಜುಲೈನಲ್ಲಿ ಕೊಡವ ಶೈಲಿಯ ಫೋಟೊಶೂಟ್‌ ಮಾಡಿಸಿ ಪೋಷಕರಾಗುತ್ತಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದರು. ಹರ್ಷಿಕಾ ಮತ್ತು ಭುವನ್‌ ಇಬ್ಬರೂ ಕೊಡಗಿನ ಮೂಲದವರು. ಈ ಜೋಡಿ 2023 ಆಗಸ್ಟ್‌ 24ರಂದು ಮದುವೆಯಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply