LATEST NEWS
17 ವರ್ಷದ ಮಗಳ ಅಕ್ರಮ ಸಂಬಂಧ …ಮಗಳ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ಬಂದ ಅಪ್ಪ..!!
ಉತ್ತರ ಪ್ರದೇಶ : ಮಗಳ ಅಕ್ರಮ ಸಂಬಂಧ ಕಣ್ಣಾರೆ ನೋಡಿದ ಅಪ್ಪ, ಮಗಳ ತಲೆಯನ್ನೆ ಕತ್ತರಿಸಿ ಪೊಲೀಸ್ ಸ್ಟೇಷನ್ ಗೆ ತೆಗೆದುಕೊಂಡು ಬಂದಿರುವ ಭಯಾನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಹರ್ದೋಯಿ ಎಂಬಲ್ಲಿ ಈ ಘಟನೆ ನಡೆದಿದ್ದು, ಸರ್ವೇಶ್ ಎಂಬಾತ ತನ್ನ 17 ವರ್ಷದ ಮಗಳು ಹುಡುಗನೊಬ್ಬನ ಜೊತೆ ಮನೆಯಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದನ್ನು ನೋಡಿದ್ದಾನೆ. ಈ ಹಿನ್ನಲೆ ಅಲ್ಲೆ ತನ್ನ ಮಗಳ ತಲೆಯನ್ನು ಕತ್ತರಿಸಿ ಅದನ್ನು ಸಾರ್ವಜನಿಕವಾಗಿ ಹಿಡಿದುಕೊಂಡು ಪೊಲೀಸ್ ಸ್ಟೇಷನ್ ಗೆ ಆಗಮಿಸಿದ್ದಾನೆ. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸರ ವಿಚಾರಣೆ ವೇಳೆ ಮಗಳ ಅನೈತಿಕ ಸಂಬಂಧಕ್ಕೆ ಬೇಸತ್ತು, ತಾನೆ ಅವಳ ತಲೆಯನ್ನು ಕತ್ತರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಅವಳ ಮೃತ ದೇಹ ಮನೆಯಲ್ಲಿದೆ ಎಂದು ತಿಳಿಸಿದ್ದಾರೆ. ಆರೋಪಿ ವಿರುದ್ದ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.