LATEST NEWS
ರೈಲಿನಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಯುವಕನ ಬಂಧನ

ರೈಲಿನಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಯುವಕನ ಬಂಧನ
ಮಂಗಳೂರು ಜೂನ್ 22: ಚಲಿಸುತ್ತಿದ್ದ ರೈಲಿನಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ಯುವಕನನ್ನು ರೈಲ್ವೆ ಪೊಲಿಸರು ಬಂಧಿಸಿದ ಘಟನೆ ನಡೆದಿದೆ.
ಆರೋಪಿಯನ್ನು ಕೇರಳ ಮೂಲದ ಯುವಕ ಸಿರಾಜ್ ಮಜಿದ್(27) ಎಂದು ಗುರುತಿಸಲಾಗಿದೆ. ಕೇರಳದಿಂದ ಗೋವಾಕ್ಕೆ ನೇತ್ರಾವತಿ ಎಕ್ಸಪ್ರೆಸ್ ರೈಲಿನಲ್ಲಿ ಕುಟುಂಬದೊಂದಿಗೆ ಬಾಲಕಿ ತೆರಳುತ್ತಿದ್ದಾಗ, ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಿರಾಜ್ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ.

ವಿಷಯ ತಿಳಿದ ರೈಲ್ವೆ ಪೊಲೀಸರು ರೈಲಿನಲ್ಲೇ ಆತನನ್ನು ಬಂಧಿಸಿದ್ದಾರೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ದೂರು ದಾಖಲಾಗಿದೆ.