LATEST NEWS
ಬಿಗ್ ಬಾಸ್ ಸೀಸನ್ 11 ರ ವಿನ್ನರ್ ಆದ ದೋಸ್ತ್ ಹನುಮಂತ
ಬೆಂಗಳೂರು ಜನವರಿ 26: ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಹನುಮಂತು ಈ ಬಾರಿ ಬಿಗ್ ಬಾಸ್ ಟೈಟಲ್ ಗೆದ್ದಿದ್ದಾರೆ.
ಟಾಪ್ 3 ಸ್ಪರ್ಧಿಗಳಾದ ರಜತ್, ತ್ರಿವಿಕ್ರಮ್ ಹಾಗೂ ಹನುಮಂತ ಅವರನ್ನು ಕರೆತರಲು ದೊಡ್ಮನೆ ಒಳಗೆ ಸುದೀಪ್ ಬಂದಿದ್ದಾರೆ. ಎರಡನೇ ರನರ್ ಅಪ್ ಆಗಿ ರಜತ್ ಪೈನಲ್ ರೇಸ್ ನಿಂದ ಹೊರ ಬಂದಿದ್ದರು, ಬಿಗ್ ಬಾಸ್ ಕಪ್ ಗಾಗಿ ಹನುಮಂತ ಹಾಗೂ ತ್ರಿವಿಕ್ರಮ್ ನಡುವೆ ಪೈಪೋಟಿ ಇತ್ತು, ಇದೀಗ ಹನುಮಂತು ಬಿಗ್ ಬಾಸ್ ಗೆಲ್ಲುವ ಮೂಲಕ ಉತ್ತರ ಕರ್ನಾಟಕದ ಹುಡುಗ ಬಿಗ್ ಬಾಸ್ ಕಪ್ ಗೆದ್ದಿದ್ದಾನೆ. ಬರೋಬ್ಬರಿ 5 ಕೋಟಿ ವೋಟ್ ಪಡೆದು ಹನುಮಂತ ಅವರು ಗೆದ್ದು ಬೀಗಿದ್ದಾರೆ. ಈ ಮೂಲಕ ಕರ್ನಾಟಕ ಜನರ ಫೇವರಿಟ್ ಎನಿಸಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗೆದ್ದ ಮೊದಲ ಸ್ಪರ್ಧಿ ಹನುಮಂತ ಆಗಿದ್ದಾರೆ. ಈ ಮೂಲಕ ಅವರು ದಾಖಲೆ ಬರೆದಿದ್ದಾರೆ. ಅವರಿಂದ ಇತಿಹಾಸವೇ ಸೃಷ್ಟಿ ಆಗಿದೆ.
ಬಿಗ್ ಬಾಸ್ ಆಟ ಶುರುವಾಗಿ 4 ವಾರ ಕಳೆದ ಮೇಲೆ ಸ್ಪರ್ಧಿಯಾಗಿ ದೊಡ್ಮನೆಗೆ ಹನುಮಂತ ಕಾಲಿಟ್ಟಿದ್ದರು, ಮೊದಲ ವಾರದಲ್ಲಿ ಗಲಾಟೆ ನೋಡಿ ಶಾಕ್ ಆಗಿದ್ದ ಹನುಮಂತು ಬಳಿಕ ಧನರಾಜ್ ಆಚಾರ್ ಜೊತೆ ಬಿಗ್ ಬಾಸ್ ನಲ್ಲಿ ಹನುಮಂತು ಮನೋರಂಜನೆ ನೀಡುವಲ್ಲಿ ಮುಂದೆ ಇದ್ದರು, ತಮ್ಮ ಮುಗ್ದತೆಯಿಂದ ಇಡೀ ಮನೆ ಮನಸ್ಸು ಗೆದ್ದಿದ್ದರು, ಇದೀಗ ಬಿಗ್ ಬಾಸ್ ಸೀಸನ್ 11 ಕೀರಿಟ ಗೆದಿದ್ದಾರೆ.