Connect with us

LATEST NEWS

ಗುವಾಹಟಿ-ಬಿಕಾನೇರ್ ಎಕ್ಸ್ ಪ್ರೆಸ್’ ರೈಲು ಹಳಿ ತಪ್ಪಿ ಭೀಕರ ದುರಂತ: ಹಲವರಿಗೆ ಗಾಯ

ಪಶ್ಚಿಮ ಬಂಗಾಳ, ಜನವರಿ 13: ಇಂದು ಸಂಜೆ ಗುವಾಹಟಿ-ಬಿಕಾನೇರ್ ಎಕ್ಸ್ ಪ್ರೆಸ್ ಪಶ್ಚಿಮ ಬಂಗಾಳದ ಡೊಮೊಹಾನಿ ಬಳಿ ಹಳಿ ತಪ್ಪಿದೆ. ಕನಿಷ್ಠ ನಾಲ್ಕು ಬೋಗಿಗಳಿಗೆ ಹಾನಿಯಾಗಿದ್ದು, ಅದರಲ್ಲಿದ್ದಂತ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.

ಪಶ್ಚಿಮ ಬಂಗಾಳದ ಡೊಮೋಹಾನಿ ಬಳಿಯಲ್ಲಿ ಸಾಗುತ್ತಿದ್ದಂತ ಗುವಾಹಟಿ-ಬಿಕಾನೇರ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದೆ. ರೈಲು ಹಳಿ ತಪ್ಪಿದ ಪರಿಣಾಮ ನಾಲ್ಕಾರು ಬೋಗಿಗಳು ಉರುಳಿ ಬಿದ್ದಿವೆ. ಈ ಬೋಗಿಗಳಲ್ಲಿದ್ದಂತ ಹಲವರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ.

ಗುವಾಹಟಿಯಿಂದ ಹೊರಟ ಬಿಕಾನೇರ್ ಎಕ್ಸ್ ಪ್ರೆಸ್ ನ ಕನಿಷ್ಠ 4 ಕಂಪಾರ್ಟ್ ಮೆಂಟ್ ಗಳು ಬಂಗಾಳದಲ್ಲಿ ಹಳಿ ತಪ್ಪಿದ್ದ ದುರಂತದಲ್ಲಿ ಇದುವರೆಗೆ ಯಾವುದೇ ಸಾವಿನ ಬಗ್ಗೆ ವರದಿಯಾಗಿಲ್ಲ. ಇದೀಗ ನಡೆದಿರುವಂತ ಘಟನೆಯ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *