LATEST NEWS
ಗುರುಪುರ ನೂತನ ಸೇತುವೆ ಲೋಕಾರ್ಪಣೆ

ದಾಖಲೆ ಅವಧಿಯಲ್ಲಿ ಮುಗಿದ ಕಾಮಗಾರಿ
ಮಂಗಳೂರು ಜೂನ್ 12: ಕುಲಶೇಖರ – ಮೂಡುಬಿದಿರೆ ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ನೂತನ ಸೇತುವೆಯನ್ನು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.
ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುರುಪುರ ಬಳಿ ಫಲ್ಗುಣಿ ನದಿಗೆ ಅಡ್ಡಲಾಗಿ ಸುಮಾರು 39.42 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸೇತುವೆಯ ಉದ್ಘಾಟನೆ ಕಾರ್ಯಕ್ರಮ ಇಂದು ನಡೆಯಿತು. ಈ ಸಂದರ್ಭ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುರುಪುರ ಸೇತುವೆಯ ಕಾಮಗಾರಿ ಕಾಲಾವಧಿಗಿಂತ ಮೊದಲೇ ಒಂದೇ ವರ್ಷದಲ್ಲಿ ಪೂರ್ಣಗೊಂಡು ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು. ಈ ರೀತಿಯ ಕೆಲಸ ಗ್ರಾಮಸ್ವರಾಜ್ಯದ ಕಲ್ಪನೆಗೆ, ರಾಮರಾಜ್ಯದ ಕಲ್ಪನೆಗೆ ಪೂರಕವಾಗಿದೆ ಎಂದು ಕಾಮಗಾರಿ ಪೂರ್ಣಗೊಳಿಸಲು ಕಾರಣರಾದ ಸಂಸದರು, ಸಚಿವರು, ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.

ಈ ಹೊಸ ಸೇತುವೆ ಯೋಜನೆಯಲ್ಲಿ 25 ಮೀ. ಉದ್ದದ ಏಳು ಅಂಕಣಗಳಿವೆ. ಎರಡೂ ಕಡೆ ಸೇತುವೆಯ ಅಗಲ 16 ಮೀ. ಸೇತುವೆ ರಸ್ತೆ ಅಗಲ 11 ಮೀ., ಕಾಲುದಾರಿ ಅಗಲ 2.50 ಮೀ., ಫೈಲ್ ಫೌಂಡೇಶನ್, ಮೇಲ್ಕಟ್ಟಡಕ್ಕೆ ಪಿಎಸ್‌ಸಿ ಗರ್ಡರ್ ಬೀಮ್ ಮತ್ತು ಸ್ಪ್ಯಾಬ್, ಎರಡೂ ಕಡೆ ತಲಾ 500 ಮೀ. ಉದ್ದದ ಸಂಪರ್ಕ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.
ಹಳೆ ಸೇತುವೆ 1920ರಲ್ಲಿ ನಿರ್ಮಾಣಗೊಂಡು ಸುಮಾರು 100ವರ್ಷಗಳ ಕಾಲ ಸಂದಿದೆ. ನೂತನ ಸೇತುವೆ ಫೆ. 21, 2019ರಲ್ಲಿ ಪ್ರಾರಂಭಗೊಂಡ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಂಡಿದೆ.