LATEST NEWS
ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಗೆ ನೀಡಲಾಗಿದ್ದ ಭದ್ರತೆ ಹಿಂಪಡೆದ ಸರಕಾರ…!!

ಮಂಗಳೂರು ಮಾರ್ಚ್ 31: ಹಿಂದೂ ಫೈರ್ ಬ್ರ್ಯಾಂಡ್ ಖ್ಯಾತಿಯ ಸತ್ಯಜಿತ್ ಸುರತ್ಕಲ್ ಅವರಿಗೆ ಸರಕಾರ ನೀಡಲಾಗಿದ್ದ ಪೊಲೀಸ್ ಭದ್ರತೆ ಹಿಂಪಡೆಯಲಾಗಿದೆ. ರಾಜ್ಯ ವಿಧಾನ ಸಭಾ ಚುನಾವಣೆ ಘೊಷಣೆಯ ಸಂದರ್ಭದಲ್ಲೇ ಸತ್ಯಜೀತರ ಅಂಗರಕ್ಷಕನನ್ನು ವಾಪಸ್ ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಮಂಗಳೂರು ಪೊಲೀಸ್ ಅಧಿಕಾರಿಗಳಿಂದ ಈಗಾಗಲೇ ಸತ್ಯಜೀತ್ ಅವರಿಗೆ ತಿಳುವಳಿಕೆ ಪತ್ರ ರವಾನೆ ಮಾಡಲಾಗಿದ್ದು ಅದರಲ್ಲಿ ಸರ್ಕಾರಿ ವೆಚ್ಚದಲ್ಲಿ ಇನ್ಮುಂದೆ ಭದ್ರತೆ ನೀಡಲಾಗುವುದಿಲ್ಲ ಭದ್ರತೆ ಬೇಕಾದಲ್ಲಿ ಹಣ ಪಾವತಿಸಿ ಪಡೆಯಬೇಕೆಂದು ಸೂಚಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಸತ್ಯಜೀತ್ ಸುರತ್ಕಲ್ ಅವರು ಮಂಗಳೂರು ಪೊಲೀಸ್ ಉಪ ಆಯುಕ್ತರಿಗೆ ಪತ್ರ ಬರೆದಿದ್ದು, ಹಣ ಪಾವತಿ ಮಾಡಿ ಭದ್ರತೆ ಇಡುವಷ್ಟು ಶಶಕ್ತನಾಗಿಲ್ಲ .ಆದ್ರೆ ಈಗಲೂ ಮುಸ್ಲೀಂ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಇದ್ದು ಸರ್ಕಾರಿ ಭದ್ರತೆಯನ್ನು ಮುಂದುವರಿಸಬೇಕೆಂದು ಕೋರಿದ್ದಾರೆ. ಸತ್ಯಜೀತ್ ಸುರತ್ಕಲ್ ಈ ಹಿಂದೆ ಹಲವು ಹಿಂದೂ ಪರ ಹೋರಾಟಗಳಲ್ಲಿ ನೇರವಾಗಿ ಭಾಗಿಯಾಗಿದ್ದರು,

ಅಯೋಧ್ಯೆ ಬಾಬರಿ ಮಸೀದಿ ಪ್ರಕರಣ, ಹುಬ್ಬಳ್ಳಿ ಈದ್ಗಾ ಮೈದಾನಿನಲ್ಲಿ ಧ್ವಜ ಹಾರಿಸಿ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದರಿಂದ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಈ ಹಿಂದಿನ ಸರ್ಕಾರಗಳು ಅವರ ಭದ್ರತೆಗಾಗಿ ಪೊಲೀಸ್ ಸಿಬಂದಿಯನ್ನು ನಿಯೋಜಿಸಿದ್ದರು.