ಅಹಮದಾಬಾದ್: ಯುವತಿಯೊಬ್ಬಳು ತನ್ನನ್ನು ತಾನೇ ಮದುವೆಯಾಗುತ್ತಿರುವ ಸುದ್ದಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಜರಾತ್‌ನ ವಡೋದರಾ ದ ಕ್ಷಮಾ ಬಿಂದು ಜೂನ್ 11ರಂದು ಸ್ವಯಂ ವಿವಾಹವಾಗಲಿದ್ದಾರೆ.

ಜೀವನಪೂರ್ತಿ ಏಕಾಂಗಿ ಯಾಗಿ ಇರಬೇಕು ಎಂದು ಅಂದುಕೊಂಡಿರುವ ಕ್ಷಮಾ ಬಿಂದು ಎಂಬ ಯುವತಿ ಈ ಸಾಹಸಕ್ಕೆ ಕೈ ಹಾಕಿದ್ದು, ಈಗಗಾಲೇ ಆಕೆಯ ಮದುವೆಗಾಗಿ ಕುಟುಂಬ ಎಲ್ಲಾ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡಿದೆ. ವಡೋದರದ ಕಲ್ಯಾಣ ಮಂಟಪವೊಂದರಲ್ಲಿ ಮದುವೆಯು ಗುಜರಾತಿ ಸಂಪ್ರದಾಯದ ಪ್ರಕಾರವಾಗಿ ಜರುಗಲಿದೆ. ಆರತಕ್ಷತೆ, ಮೆಹಂದಿ ಸೇರಿದಂತೆ ಮುಹೂರ್ತ ಕೂಡ ನಡೆಯಲಿದೆ. ಯುವತಿಯು ತನ್ನಷ್ಟಕ್ಕೆ ತಾನೇ ಮಾಂಗಲ್ಯ ಕಟ್ಟಿಕೊಳ್ಳಲಿದ್ದಾರೆ. ನಂತರ ಮಧುಚಂದ್ರಕ್ಕೆ ಗೋವಾಗೆ ತೆರಳಲಿದ್ದಾರೆ ಎಂದು ಕ್ಷಮಾ ಬಿಂದು ಕುಟುಂಬದವರು ಹೇಳಿದ್ದಾರೆ.

ಇದೇ ನನ್ನ ಮೊದಲ ವಿವಾಹ ಎಂದು ಕ್ಷಮಾ ಹೇಳಿದ್ದಾರೆ. ವಡೋದಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕ್ಷಮಾ ಕೆಲಸ ಮಾಡುತ್ತಿದ್ದಾರೆ. ಅವರ ಸ್ವಯಂ ಮದುವೆಗೆ ಕುಟುಂಬದವರ ಒಪ್ಪಿಗೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನಾನು ಜೀವನ ಪೂರ್ತಿ ಏಕಾಂಗಿಯಾಗಿರಬೇಕು ಎಂದು ಬಯಸಿರುವೆ. ಭಾರತದಲ್ಲಿ ಇಲ್ಲಿಯವರೆಗೂ ಯಾರೂ ಕೂಡ ಸ್ವಯಂ ಮದುವೆಯಾಗಿಲ್ಲ,