ಅಹ್ಮದಾಬಾದ್ ಅಕ್ಟೋಬರ್ 28: ಹೊಟೇಲ್ ಒಂದಕ್ಕೆ ಹೋಗಿ ಜೋಯಿಯೊಂದು ಸುಮಾರು 11 ಸಾವಿರ ಬಿಲ್ ನಷ್ಟು ತಿಂದು ಬಳಿಕ ಹಣ ನೀಡದೇ ಪರಾರಿಯಾದಿ ಘಟನೆ ನಡೆದಿದ್ದು, ಆದರೆ ಪರಾರಿಯಾಗುವ ವೇಳೆ ಟ್ರಾಫಿಕ್ ಜಾಮ್ ನಿಂದಾಗಿ ಹೊಟೇಲ್ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದ ಘಟನೆ ರಾಜಸ್ಥಾನದ ಅಬು ರಸ್ತೆಯಲ್ಲಿರುವ ಹೋಟೆಲ್ ಒಂದರಲ್ಲಿ ನಡೆದಿದೆ.

ರಾಜಸ್ಥಾನದ ಮೌಂಟ್ ಅಬು ಬಳಿಯ ಸಿಯಾವಾದಲ್ಲಿರುವ ಹ್ಯಾಪಿ ಡೇ ಹೋಟೆಲ್ಗೆ ಒಬ್ಬ ಮಹಿಳೆ ಸೇರಿದಂತೆ ಐದು ಪ್ರವಾಸಿಗರ ಗುಂಪು ಆಗಮಿಸಿತ್ತು, ಹೊಟೇಲ್ ನಲ್ಲಿ ಊಟ ಮಾಡಿದ ಪ್ರವಾಸಿಗರ ಗುಂಪು ಬರೋಬ್ಬರಿ 10,900 ಬಿಲ್ ಮಾಡಿತ್ತು, ಬಿಲ್ ಪಾವತಿಸುವ ವೇಳೆ ಟಾಯ್ಲೆಟ್ ಗೆ ಹೋಗುವ ನೆಪದಲ್ಲಿ ಎಲ್ಲರು ರೆಸ್ಟೊರೆಂಟ್ ನಿಂದ ಹೊರಗೆ ಬಂದು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ.
ಕೂಡಲೇ ಹೊಟೇ್ಲ್ ಸಿಬ್ಬಂದಿ ಪ್ರವಾಸಿಗರಿದ್ದ ಕಾರನ್ನು ಬೆನ್ನಟ್ಟಿದ್ದಾರೆ. ಪ್ರವಾಸಿಗರ ದುರಾದೃಷ್ಟಕ್ಕೆ ರಸ್ತೆಯಲ್ಲಿ ಟ್ರಾಫಿಕ್ ಜಾಸ್ತಿ ಇದ್ದ ಕಾರಣ ಹೊಟೇಲ್ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಪ್ರಸ್ತುತ ಹಣ ಪಾವತಿ ಮಾಡದೇ ಪರಾರಿಯಾಗಿದ್ದ ಪ್ರವಾಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಳಿಕ ಹಣ ಪಾವತಿ ಮಾಡಿದ್ದಾರೆ ಎಂದು ವರದಿಯಾಗಿದೆ. ಊಟ ಮಾಡಿದ ನಂತರ ಬಿಲ್ ಪಾವತಿಸದೆ ಓಡಿಹೋದ ಮಹಿಳೆ ಸೇರಿದಂತೆ ಐದು ಪ್ರವಾಸಿಗರನ್ನು ಗುಜರಾತ್ ಗಡಿಯ ಬಳಿ ಹೋಟೆಲ್ ಮಾಲೀಕರು ಬೆನ್ನಟ್ಟಿ ಹಿಡಿದಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.