FILM
ಸೂರತ್ – ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಮಾಡೆಲ್

ಸೂರತ್ ಜೂನ್ 10: ಯವ ಮಾಡೆಲ್ ಒಬ್ಬಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಸೂರತ್ ನಗರದಲ್ಲಿ ನಡೆದಿದೆ. ತನ್ನ ಗೆಳೆಯನೊಂದಿಗನ ಬ್ರೆಕ್ ಅಪ್ ಬಳಿಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.
ಮೃತರನ್ನು 23 ವರ್ಷದ ಮಾಡೆಲ್ ಅಂಜಲಿ ವರ್ಮೋರಾ ಎಂದು ಗುರುತಿಸಲಾಗಿದೆ. ತನ್ನ ಗೆಳೆಯನೊಂದಿಗಿನ ಮನಸ್ಥಾಪದ ಬಳಿಕ ಈ ಆಘಾತಕಾರಿ ಹೆಜ್ಜೆ ಇಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಅಂಜಲಿ ವರ್ಮೋರಾ ಶನಿವಾರ ರಾತ್ರಿ ಸ್ಕಾರ್ಫ್‌ನಿಂದ ಫ್ಯಾನ್‌ಗೆ ಕಟ್ಟಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಪ್ರೇಮ ಸಂಬಂಧದಲ್ಲಿ ಅವರು ಬ್ರೇಕ್‌ಅಪ್ ಆಗಿದ್ದಾರೆ ಎಂಬ ವ್ಯಾಪಕ ಚರ್ಚೆ ನಡೆಯುತ್ತಿದೆ. ಅಂಜಲಿ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಕೂಡ ವೈರಲ್ ಆಗಿದ್ದು, ಅದರಲ್ಲಿ ಅವರು “ನಾನು ನಿಮಗೆ ಏನೂ ಅಲ್ಲ ಎಂದು ಇಂದು ನಾನು ಅರಿತುಕೊಂಡೆ” ಎಂದು ಬರೆದಿದ್ದಾರೆ. ಈ ಪೋಸ್ಟ್ ಅವರ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು ಎಂಬುದು ತಿಳಿದುಬಂದಿದೆ.