LATEST NEWS
65 ವರ್ಷದ ವಯಸ್ಸಿನಲ್ಲೂ ಕಾಲಿಗೆ ಸರಪಳಿ ಬಿಗಿದುಕೊಂಡು ಸಮುದ್ರದಲ್ಲಿ 3.5 ಕಿಲೋ ಮೀಟರ್ ಈಜಿ ದಾಖಲೆ
ಉಡುಪಿ ಜನವರಿ 25: 65 ವರ್ಷ ವಯಸ್ಸಿನಲ್ಲೂ ಪ್ರಕ್ಷುಬ್ದ ಕಡಲಲ್ಲಿ 3.5 ಕಿಲೋ ಮೀಟರ್ ಈಜಿ ದಾಖಲೆ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತಮ್ಮ ಹೆಸರು ಸೇರಿಸಿದ್ದಾರೆ.
ಸಾರಿಗೆ ಇಲಾಖೆಯ ಮಾಜಿ ಉದ್ಯೋಗಿಯಾಗಿದ್ದ ಗಂಗಾಧರ್ ಅವರು 50 ವರ್ಷ ವಯಸ್ಸಿನವರಾಗಿದ್ದಾಗ ಈಜಲು ಕಲಿತರು. ಸೋಮವಾರ ಗಂಗಾಧರ್ ಅವರ ಈ ಸಾಧನೆಗೆ ಅನೇಕ ಉತ್ಸಾಹಿಗಳು ಬೆಂಬಲಿಸಿದರು.
ಗಂಗಾಧರ್ ಅವರು ಬೆಳಗ್ಗೆ 7.50ಕ್ಕೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನ ವೀಕ್ಷಕರು ಮತ್ತು ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರ ಸಮ್ಮುಖದಲ್ಲಿ ಕೈಗೆ ಕೋಳ, ಕಾಲಿಗೆ ಸರಪಳಿ ಬಿಗಿದು ಸಮುದ್ರಕ್ಕೆ ಧುಮುಕಿದರು. 1,775 ಮೀಟರ್ ದೂರ ಹೋಗಿ ಅದೇ ರೀತಿ ಹಿಂದಕ್ಕೆ ಮಧ್ಯಾಹ್ನ ಸುಡುಬಿಸಿಲಿನ 1.25ಕ್ಕೆ ದಡ ಸೇರಿದರು.
ಗಂಗಾಧರ್ ಅವರು ಪಡುಕೆರೆಯಿಂದ 3.5 ಕಿಲೋಮೀಟರ್ ದೂರವನ್ನು ಐದು ಗಂಟೆ 35 ನಿಮಿಷಗಳಲ್ಲಿ ಕ್ರಮಿಸಿದರು. ಕೈಗೆ ಕೋಳ ಹಾಕಿಕೊಂಡು, ಕಾಲಿಗೆ ಸರಪಳಿ ಬಿಗಿದುಕೊಂಡು ಈಜುವ ಮೂಲಕ ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂದು ಸಾಬೀತು ಮಾಡಿದ್ದಾರೆ.
ಗಂಗಾಧರ್ ಅವರು ಕಳೆದ ವರ್ಷ ಜನವರಿ 24 ರಂದು ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು 1.40 ಕಿ.ಮಿ. ಬ್ರೆಸ್ವ್ ಸ್ಟ್ರೋಕ್ ಶೈಲಿಯಲ್ಲಿ ಸಮುದ್ರದಲ್ಲಿ ಈಜಿ ಇಂಡಿಯನ್ ಬುಕ್ ಆಫ್ ರೆಕಾಡ್ಸ್‌ನಲ್ಲಿ ತಮ್ಮ ಹೆಸರು ದಾಖಲಿಸಿದ್ದರು.