Connect with us

    LATEST NEWS

    ಮೂರು ಸಾವಿರ ವರ್ಷಗಳ ಇತಿಹಾಸ ಹೇಳುವ ಗುಹಾ ಸಮಾಧಿ

    ಮೂರು ಸಾವಿರ ವರ್ಷಗಳ ಇತಿಹಾಸ ಹೇಳುವ ಗುಹಾ ಸಮಾಧಿ

    ಉಡುಪಿ ಮೇ 22: ಮೂರು ಸಹಸ್ರಮಾನದ ಕಥೆ ಹೇಳುವ ಅಪರೂಪದ ಗುಹಾ ಸಮಾಧಿಯೊಂದು ಉಡುಪಿಯಲ್ಲಿ ಪತ್ತೆಯಾಗಿದೆ. ನೆಲ ಸಮತಟ್ಟು ಮಾಡುವಾಗ ಇದ್ದಕ್ಕಿದ್ದಂತೆ ಮಣ್ಣು ಕುಸಿದು ಮಡಿಕೆಯಾಕಾರದ ಬೃಹತ್ ಸಮಾಧಿ ತೆರೆದುಕೊಂಡಿದೆ.

    ಉಡುಪಿ ಜಿಲ್ಲೆಯ ಪೆರಂಪಳ್ಳಿಯಲ್ಲಿ ಈ ನಿಗೂಢ ಸಮಾಧಿ ಪತ್ತೆಯಾಗಿದೆ. ಇದನ್ನು ಗುಹಾ ಸಮಾಧಿ ಎಂದು ಕರೆಯಲಾಗುತ್ತದೆ. ಇತಿಹಾಸದ ಪ್ರಕಾಸ ಕ್ರಿಸ್ತಪೂರ್ವ 800 ವರ್ಷಗಳ ಹಿಂದೆ ಅಂದ್ರೆ ಸುಮಾರು 2800ವರ್ಷಗಳ ಹಿಂದೆ ಈ ರೀತಿಯ ಸಮಾಧಿ ಮಾಡುತ್ತಿದ್ದರು. ಸತ್ತ ಮನುಷ್ಯನ ಅಸ್ತಿಯನ್ನು ಮಡಿಕೆಯೊಳಗೆ ಇಟ್ಟು ಗುಹೆಯಂತಹಾ ಸಮಾಧಿ ರಚನೆ ಮಾಡಿ ಹೂತಿಡಲಾಗುತ್ತಿತ್ತು.ಪೆರಂಪಳ್ಳಿಯ ಹರಿಕೃಷ್ಣ ಶಿವತ್ತಾಯ ಎಂಬವರ ಮನೆಯ ಆವರಣದಲ್ಲಿ ಪತ್ತೆಯಾದ ಈ ಶಿಲಾಯುಗದ ಸ್ಮಾರಕ ಇತಿಹಾಸಜ್ಞರನ್ನು ಕುತೂಹಲದಲ್ಲಿ ತಳ್ಳಿದೆ.

    ಮೇ.22 ರಂದು ಕಟೀಲು ಮೇಳದ ಹರಕೆಯ ಬಯಲಾಟ ಅಂದ್ರೆ ಯಕ್ಷಗಾನ ನಡೆಸಲು ಇಲ್ಲಿ ಸಿದ್ದತೆ ಮಾಡಲಾಗಿತ್ತು. ಇದಕ್ಕಾಗಿ ಜಿಸಿಬಿ ಬಳಸಿ, ನೆಲ ಸಮತಟ್ಟು ಮಾಡುವಾಗ ಈ ಸಮಾಧಿ ಪತ್ತೆಯಾಗಿದೆ. ಇದೇ ಸ್ಥಳದಲ್ಲಿ ಈ ಹಿಂದೆಯೂ ಹತ್ತಾರು ಯಕ್ಷಗಾನ ಪ್ರದರ್ಶನ ಏರ್ಪಾಟಾಗಿತ್ತು. ನೂರಾರು ಬಾರಿ ಜೆಸಿಬಿ ನೆಲ ಕೊರೆದಿತ್ತು. ಆದರೂ ಸಮಾಧಿಯ ಪತ್ತೆ ಇರಲಿಲ್ಲ. ಇದೀಗ ಕಟೀಲು ಮೇಳದ ಹರಕೆಯಾಟ ನಡೆಯುವಾಗಲೇ ಗುಹಾ ಸಮಾಧಿ ಪತ್ತೆಯಾಗಿರೋದು, ದೇವಿಕ ಕಾರಣಿಕ ಎಂದೇ ಇಲ್ಲಿನ ಜನ ಭಾವಿಸುತ್ತಾರೆ.

    ಭಕ್ತರನ್ನು ಹರಸಲು ಬಂದ ದೇವಿ,ಇತಿಹಾಸಕ್ಕೆ ಬೆಳಕು ಚೆಲ್ಲಿದ್ದಾಳೆ.ಇತಿಹಾಸಜ್ಞರಿಗೆ ಇದು ಮಹತ್ವದ ಕುರುಹಾಗಿದೆ. ಹೆಚ್ಚಿನ ಅಧ್ಯಯನಕ್ಕೆ ಇಲ್ಲಿ ದೊರೆತ ಶಿಲಾಯುಗವ ಆಯುಧ, ಮಡಕೆಯೆ ಚೂರುಗಳನ್ನು ಪೂನಾಗೆ ಕಳುಹಿಸಲಾಗುತ್ತಿದೆ.ಸಮಾಧಿಯಾಗುತ್ತಿದ್ದ ಉಡುಪಿಯ ಇತಿಹಾಸ, ಈ ಗುಹಾ ಸಮಾಧಿಯ ಮೂಲಕ ಮತ್ತೆ ಜೀವ ಪಡೆದುಕೊಂಡಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *