LATEST NEWS
ಮದುವೆ ಮಂಟಪದಲ್ಲಿ ತಲೆಸುತ್ತಿ ಬಿದ್ದ ವರ; ವರನ ಅಸಲಿಯತ್ತು ಕಂಡು ಮದುವೆ ಬಂದ್..!
ಉತ್ತರ ಪ್ರದೇಶ, ಮೇ 23: ಹಸೆಮಣೆಯಲ್ಲಿ ಕುಳಿತಿದ್ದ ವಧು, ವಿವಾಹದ ಸಂಪ್ರದಾಯಗಳನ್ನು ನಡೆಸುತ್ತಿರುವಂತೆಯೇ ವರನನ್ನು ಮದುವೆಯಾಗಲು ನಿರಾಕರಿಸಿರೋ ಘಟನೆ ಉತ್ತರ ಪ್ರದೇಶದ ಉನ್ನಾವೊದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಉನ್ನಾವೊದ ವಧು, ವರನ ತಲೆ ಬೋಳಾಗಿದೆ ಎಂದು ತಿಳಿದ ನಂತರ ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ತಲೆಗೆ ವಿಗ್ ಧರಿಸಿ ಬೋಳು ತಲೆಯನ್ನು ವರ ಮರೆಮಾಚಿದ್ದಾನೆ. ಈ ಘಟನೆಯು ಖಂಡಿತವಾಗಿಯೂ ನಿಮಗೆ ಆಯುಷ್ಮಾನ್ ಖುರಾನಾ ಅವರ 2019ರ ಚಲನಚಿತ್ರ ‘ಬಾಲಾ’ವನ್ನು ನೆನಪಿಸುತ್ತದೆ.
ಈ ಉನ್ನಾವೋ ಘಟನೆಯಲ್ಲಿ, ಮದುವೆಯ ಅರ್ಧದಷ್ಟು ಸಂಪ್ರದಾಯಗಳು ಮುಗಿದಿದ್ದವು. ಇನ್ನೇನು ಮಾಂಗಲ್ಯಧಾರಣೆ ಮಾಡಬೇಕು ಅನ್ನೋವಾಗ ಇಡೀ ಸನ್ನಿವೇಶವು ಬದಲಾಗಿದೆ. ವರ, ಮಂಟಪಕ್ಕೆ ಕಾಲಿಡುವ ಮೊದಲು, ಮೂರ್ಛೆ ತಪ್ಪಿದ್ದಾನೆ. ಆತ ತಲೆಸುತ್ತಿ ಕೆಳಕ್ಕೆ ಬಿದ್ದಾಗ, ವರನ ಅಸಲಿಯತ್ತು ಬಯಲಾಗಿದೆ. ಆತ ಧರಿಸಿದ್ದ ವಿಗ್ ಹೊರಬಂದಿದೆ. ಈ ವೇಳೆ ವಧುವಿನ ಕುಟುಂಬದಿಂದ ಮರೆಮಾಡಲ್ಪಟ್ಟ ಸತ್ಯವನ್ನು ಎಲ್ಲರೂ ನೋಡಿದ್ದಾರೆ.
ವರನ ಬೋಳು ತಲೆ ಕಂಡು ವಧು ಮದುವೆಗೆ ಒಲ್ಲೆ ಎಂದಿದ್ದಾಳೆ. ಅನೇಕರು ಆಕೆಯನ್ನು ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸರು ಮಧ್ಯಪ್ರವೇಶಿಸಿದರೂ ಸಹ ವಧು ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.