KARNATAKA
ಗೋಬಿ ಮಂಚೂರಿ ಬಿಸಾಕಿದ್ದಕ್ಕೆ ಅಜ್ಜಿಕೊಲೆ ಮಾಡಿದ ಮೊಮ್ಮಗ…5 ವರ್ಷ ಬಳಿಕ ಪೊಲೀಸ್ ಬಲೆಗೆ ಸಿಕ್ಕಿಬಿದ್ದ….!!

ಬೆಂಗಳೂರು ಸೆಪ್ಟೆಂಬರ್ 08: ಅಜ್ಜಿ ತಿನ್ನಲು ಕೊಟ್ಟ ಗೋಬಿ ಮಂಚೂರಿಯನ್ನು ಬಿಸಾಕಿದ್ದಕ್ಕೆ ಮೊಮ್ಮಗ ಅಜ್ಜಿಯನ್ನು ಕೊಂದು ಮನೆಯಲ್ಲಿ ಕಪಾಟಿನಲ್ಲಿ ಬಚ್ಚಿಟ್ಟು 5 ವರ್ಷಗಳ ಬಳಿಕ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಳೆದ ಐದು ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು, 5 ವರ್ಷಗಳ ಬಳಿಕ ಇದೀಗ ಮೊಮ್ಮಗ ಹಾಗೂ ಆತನ ತಾಯಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಂಗೇರಿ ಉಪನಗರ ಬಡಾವಣೆಯ ಮನೆಯೊಂದರಲ್ಲಿ ಹತ್ಯೆಯಾದ 69 ವರ್ಷದ ಶಾಂತಕುಮಾರಿ ಜೊತೆಗೆ ಮಗಳು ಶಶಿಕಲಾ ಹಾಗೂ ಮೊಮ್ಮಗ ಸಂಜಯ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಶಿಸ್ತು ಹಾಗೂ ಮಡಿವಂತಿಕೆಯನ್ನು ಶಾಂತಕುಮಾರಿ ಬೆಳೆಸಿಕೊಂಡಿದ್ದರು. ಈಕೆಯ ಪತಿ ಹಲವು ವರ್ಷಗಳ ಹಿಂದೆ ಮೃತರಾಗಿದ್ದರು.

ಓದುವ ವಿಷಯದಲ್ಲಿ ಮುಂದಿದ್ದು ಪ್ರತಿಭಾವಂತನಾಗಿದ್ದ ಸಂಜಯ್ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಮಡಿ-ಮೈಲಿಗೆ ಸಂಪ್ರದಾಯ ಬೆಳೆಸಿಕೊಂಡಿದ್ದ ವೃದ್ದೆ ಶಾಂತಕುಮಾರಿ ಅದನ್ನು ಪಾಲಿಸುವಂತೆ ಮನೆಯವರ ಮೇಲೆ ಒತ್ತಡ ತರುತ್ತಿದ್ದರು. 2016ರ ಆಗಸ್ಟ್‌ನಲ್ಲಿ ಕಾಲೇಜು ಮುಗಿಸಿ ಸಂಜಯ್ ಮನೆಗೆ ಬಂದು ಗೋಬಿಮಂಜೂರಿ ತಂದುಕೊಟ್ಟಿದ್ದ. ಇದನ್ನು ಯಾವುದೇ ಕಾರಣಕ್ಕೂ ಮನೆಯವರೂ ಸೇವಿಸಬಾರದು ಎಂದು ನಿರಾಕರಿಸಿ ಬೈದು ಮೊಮ್ಮಗನ ಮೇಲೆ ಬಿಸಾಕಿದ್ದರು. ಇದರಿಂದ ಆಕ್ರೋಶಗೊಂಡ ಸಂಜಯ್ ಅಡುಗೆ ಮನೆಯಲ್ಲಿದ್ದ ಲಟ್ಟಣಿಗೆ ತಂದು ಅಜ್ಜಿಯತ್ತ ಎಸೆದಿದ್ದು ಅದು ಬಲವಾಗಿ ತಲೆಗೆ ತಗುಲಿ ತೀವ್ರ ರಕ್ತಸ್ರಾವವಾಗಿ ಮನೆಯಲ್ಲಿ ಶಾಂತಕುಮಾರಿ ಮೃತಪಟ್ಟಿದ್ದರು.
ತಾಯಿ ಮೃತಪಟ್ಟ ಸಂಗತಿ ಹೊರಗೆ ಗೊತ್ತಾದರೆ ಕೊಲೆ ಪ್ರಕರಣದಲ್ಲಿ ಮಗ ಸಂಜಯ್ ಜೈಲಿಗೆ ಹೋಗಬಹುದೆಂದು ರಾಧಾ ಹೆದರಿದ್ದರು. ಹೀಗಾಗಿ, ಎರಡು ದಿನ ಮೃತದೇಹವನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು’ ಎಂದು ತಿಳಿಸಿವೆ. ‘ಮೃತದೇಹದಿಂದ ವಾಸನೆ ಬರಲಾರಂಭಿಸಿತ್ತು. ಮನೆಯ ಗೋಡೆಯ ಕಪಾಟಿನೊಳಗೆ ಮೃತದೇಹ ಇರಿಸಿದ್ದ ಆರೋಪಿಗಳು, ಅದರ ಬಾಗಿಲು ಮುಚ್ಚಿದ್ದರು. ನಂತರ, ಕಪಾಟಿನ ಸುತ್ತಲೂ ಕೆಮ್ಮಣ್ಣು ಹಾಗೂ ಸಿಮೆಂಟ್‌ನಿಂದ ಪ್ಲಾಸ್ಟಿಂಗ್ ಮಾಡಿದ್ದರು. ಬಣ್ಣ ಬಳೆದಿದ್ದರು. ಇದಾದ ನಂತರ, ನಾಲ್ಕು ತಿಂಗಳು ಅದೇ ಮನೆಯಲ್ಲಿ ವಾಸವಿದ್ದರು. ಶಾಂತಕುಮಾರಿ ಮೃತಪಟ್ಟ ಬಗ್ಗೆ ಅಕ್ಕ–ಪಕ್ಕದವರಿಗೆ ಯಾವುದೇ ಅನುಮಾನ ಬಂದಿರಲಿಲ್ಲ’ ಎಂದು ಮೂಲಗಳು ಹೇಳಿವೆ. ಬಂಧನ ಭೀತಿಯಲ್ಲೇ ಇದ್ದ ರಾಧಾ ಹಾಗೂ ಸಂಜಯ್, ನಗರ ತೊರೆಯಲು ಮುಂದಾಗಿದ್ದರು. ಸಾಗರದಲ್ಲಿರುವ ಅಜ್ಜ ಆರೋಗ್ಯ ಸರಿ ಇಲ್ಲವೆಂದು ಮನೆ ಮಾಲೀಕನಿಗೆ ಹೇಳಿ ಆರೋಪಿಗಳು ಪರಾರಿಯಾಗಿದ್ದರು. ಕೊಲ್ಲಾಪುರಕ್ಕೆ ಹೋಗಿ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಹಲವು ದಿನವಾದರೂ ಆರೋಪಿಗಳು ವಾಪಸು ಬಂದಿರಲಿಲ್ಲ. ಹೀಗಾಗಿ, ಮಾಲೀಕರು ಮನೆ ಬಾಗಿಲು ತೆಗೆದಿದ್ದರು. ಕಪಾಸಿಗೆ ಪ್ಲಾಸ್ಟಿಂಗ್ ಮಾಡಿದ್ದನ್ನು ಗಮನಿಸಿದ್ದರು. ರಕ್ತಸಿಕ್ತ ಬಟ್ಟೆಗಳೂ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದವು. ಅನುಮಾನಗೊಂಡು ಠಾಣೆಗೆ ಮಾಹಿತಿ ನೀಡಿದ್ದರು.