Connect with us

    LATEST NEWS

    ಎಚ್ಚರ !! ಕೋವಿಡ್ 19 ಹೆಸರಲ್ಲಿ ಸೈಬರ್ ದಾಳಿ ..!

    ಭಾರತದ ಹಣಕಾಸು ಸಂಸ್ಥೆಗಳು, ಸರಕಾರಿ ಇಲಾಖೆಗಳೇ ಗುರಿ

    ನವದೆಹಲಿ, ಜೂನ್ 21 : ಕೊರೊನಾ ವೈರಸ್ ದಾಳಿ ಇಡೀ ದೇಶವನ್ನು ಆವರಿಸಿರುವಾಗಲೇ ಭಾರತದಲ್ಲಿ ಕೊರೊನಾ ಹೆಸರಲ್ಲಿಯೇ ಭಾರೀ ಸೈಬರ್ ಅಟ್ಯಾಕ್ ಆಗುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

    ಕೇಂದ್ರ ಸರಕಾರದ ಸೈಬರ್ ಅಟ್ಯಾಕ್ ನೋಡಲ್ ಏಜನ್ಸಿ ಆಗಿರುವ CERT – In ಈ ಎಚ್ಚರಿಕೆ ನೀಡಿದ್ದು, ಬ್ಯಾಂಕ್ ಮಾದರಿಯ ಹಣಕಾಸು ಸಂಸ್ಥೆಗಳು, ವ್ಯಾಪಾರಿ ಸಂಸ್ಥೆಗಳು ಮತ್ತು ಸರಕಾರದ ಇಲಾಖೆಗಳನ್ನು ಗುರಿಯಾಗಿರಿಸಿ ಈ ದಾಳಿ ನಡೆಯಲಿದೆ ಎಂದು ಮುನ್ಸೂಚನೆ ನೀಡಿದೆ. ಕೊರೊನಾ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಸೈಬರ್ ಹ್ಯಾಕರ್ ಗಳು, ಕೊರೊನಾ ಜಾಗೃತಿ ಹೆಸರಲ್ಲಿ ಇ ಮೇಲ್ ಸಂದೇಶಗಳನ್ನು ಕಳಿಸಲಿದ್ದಾರೆ. [email protected] ಎನ್ನುವ ಹೆಸರಲ್ಲಿ ಇ ಮೇಲ್ ಸಂದೇಶಗಳು ಬರಲಿದ್ದು ಅದನ್ನು ಓಪನ್ ಮಾಡಿದರೆ ಸಂಸ್ಥೆಗೆ ಸಂಬಂಧಪಟ್ಟ ಖಾಸಗಿ ಮಾಹಿತಿಗಳು ಸೋರಿಕೆ ಆಗಲಿದೆ ಎಂದು ಏಜನ್ಸಿ ಹೇಳಿದೆ.


    ಕೋವಿಡ್ 19 ಹಿನ್ನೆಲೆಯಲ್ಲಿ ಅನುದಾನ ವಿಚಾರಗಳು, ಫಂಡಿಂಗ್, ಸ್ಥಳೀಯಾಡಳಿತಕ್ಕೆ ಮಾಹಿತಿಗಳು ಇತ್ಯಾದಿ ಹೆಸರಲ್ಲಿ ಇ ಮೇಲ್ ಸಂದೇಶಗಳು ಬರಲಿವೆ. ಇಂಥ ಇ ಮೇಲ್ ಗಳು ನಕಲಿ ವೆಬ್ ಸೈಟ್ ಗಳಿಂದ ಮಾಡಲ್ಪಟ್ಟಿದ್ದು, ಮೇಲ್ ಓಪನ್ ಮಾಡಿದ ಕೂಡಲೇ ಆಟೊಮ್ಯಾಟಿಕ್ ಆಗಿ ಅದರಲ್ಲಿರುವ ಮಾಹಿತಿಗಳು ಹ್ಯಾಕರ್ ವೆಬ್ ಗೆ ಸೋರಿಕೆ ಆಗಲಿದೆ ಎಂದು ಮಾಹಿತಿ ನೀಡಿದೆ. ಹೀಗಾಗಿ ಪರಿಚಿತ ಸಂಸ್ಥೆಗಳ ಹೆಸರಲ್ಲಿ ಇಮೇಲ್ ಬಂದಿದ್ದರೂ, ಖಚಿತಪಡಿಸಿಕೊಂಡ ನಂತರವೇ ಮೇಲ್ ಓಪನ್ ಮಾಡುವಂತೆ ಸಲಹೆ ನೀಡಿದೆ.

    ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸರ್ಟ್ – ಇನ್) ಭಾರತ ಸರಕಾರದ ಸೈಬರ್ ಅಟ್ಯಾಕ್ ನೋಡಲ್ ಏಜನ್ಸಿಯಾಗಿದ್ದು, ಭಾರತ ಸರಕಾರಕ್ಕೆ ಮತ್ತು ಹಣಕಾಸು ಸಂಸ್ಥೆಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಸೈಬರ್ ಅಟ್ಯಾಕ್ ಮಾ಼ಡುವ ಹ್ಯಾಕರ್ ಗಳು ಈಗಾಗ್ಲೇ ಎರಡು ಮಿಲಿಯನ್ ಗಿಂತಲೂ ಭಾರತೀಯರ ಇಮೇಲ್ ಐಡಿಗಳನ್ನು ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಈ ಸೈಬರ್ ಅಟ್ಯಾಕ್ ಹಿಂದೆ ಚೀನಾದ ಪಾತ್ರ ಇದೆಯೇ ಅನ್ನುವುದು ದೃಢವಾಗಿಲ್ಲ. ಭಾರತದಲ್ಲಿ ಚೀನಾ ವಿರುದ್ಧ ಅಭಿಯಾನ ನಡೆಯುತ್ತಿರುವಾಗಲೇ ಈ ಸೈಬರ್ ದಾಳಿ ಬಗ್ಗೆ ಮುನ್ಸೂಚನೆ ಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply