LATEST NEWS
ಹೊರಗಿನವರು ಉಡುಪಿ ಜಿಲ್ಲೆಗೆ ಆಗಮಿಸಿದರೆ ಕ್ವಾರಂಟೈನ್ ಕಡ್ಡಾಯ – ಜಿಲ್ಲಾಧಿಕಾರಿ ಜಗದೀಶ್
ಹೊರಗಿನವರು ಉಡುಪಿ ಜಿಲ್ಲೆಗೆ ಆಗಮಿಸಿದರೆ ಕ್ವಾರಂಟೈನ್ ಕಡ್ಡಾಯ – ಜಿಲ್ಲಾಧಿಕಾರಿ ಜಗದೀಶ್
ಉಡುಪಿ, ಮೇ.03 ಉಡುಪಿ ಜಿಲ್ಲೆಗೆ ಹೊರ ರಾಜ್ಯದಿಂದ ಅಥವಾ ಹೊರ ಜಿಲ್ಲೆಯಿಂದ ಆಗಮಿಸಿದರೆ ಅವರಿಗೆ ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್ ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದ್ದಾರೆ.
ಜಿಲ್ಲೆಯ ನಾಗರೀಕರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಹೊರರಾಜ್ಯದಿಂದ ಬರುವವರು ಮತ್ತು ಹೊರ ಜಿಲ್ಲೆಯಿಂದ ಬರುವವರು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್ ಗೆ ಒಳಪಡಬೇಕಾಗುತ್ತದೆ, ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸುವವರೆಗೂ ಜಿಲ್ಲೆಯ ಗಡಿಯಲ್ಲಿ, ಹೊರ ರಾಜ್ಯದಿಂದ ಆಗಮಿಸುವ ಯಾವುದೇ ವಾಹನಗಳಿಗೆ ಪ್ರವೇಶ ನೀಡದಂತೆ ಅವರು ಸೂಚಿಸಿದ್ದಾರೆ.
ಹೊರರಾಜ್ಯದಿಂದ ಆಗಮಿಸುವವರನ್ನು ಉಡುಪಿಯ ಎಂಜಿಎಂ ಮೈದಾನದಲ್ಲಿ ವ್ಯೆದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸಂಬಂದಪಟ್ಟ ತಾಲೂಕು ಕೇಂದ್ರಗಳಿಗೆ ಕಳುಹಿಸಲಾಗುವುದು ಅಲ್ಲಿ ಅವರನ್ನು ಸರ್ಕಾರಿ ಕ್ವಾರಂಟೈನ್‌ಗಾಗಿ ವಿವಿಧ ಹಾಸ್ಟೆಲ್‌ಗಳನ್ನು ನಿಗದಿಗೊಳಿಸಿದ್ದು, ಹೊಟೇಲ್‌ಗಳನ್ನು ಸಹ ನಿಗದಿಗೊಳಿಸಲಾಗಿದೆ, ಹೊಟೇಲ್‌ಗಳಲ್ಲಿ ಕ್ವಾರಂಟೈನ್ ಆಗುವವವರು ಹೊಟೇಲ್‌ನ ವೆಚ್ಚವನ್ನು ಸ್ವತಃ ಭರಿಸಬೇಕು, ಇದಕ್ಕಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಹಾಸ್ಟೆಲ್‌ಗಳು ಮತ್ತು ಹೊಟೇಲ್‌ಗಳನ್ನು ಗುರುತಿಸುವಂತೆ ಎಲ್ಲಾ ತಹಸೀಲ್ಧಾರ್‌ಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಉಡುಪಿ ಜಿಲ್ಲೆಯಿಂದ ಅಂತರ್ ಜಿಲ್ಲಾ ಪ್ರವಾಸಕ್ಕೆ ಅನುಮತಿ ಇಲ್ಲವಾಗಿದ್ದು, ವೈದ್ಯಕೀಯ ಕಾರಣ ಹೊರತುಪಡಿಸಿ ಇತರೆ ಕಾರಣಕ್ಕೆ ಪಾಸ್‌ಗಳನ್ನು ನೀಡುವುದಿಲ್ಲ, ಪಾಸ್ ಇಲ್ಲದೇ ಅಕ್ರಮ ಪ್ರವೇಶಿಸುವವರನ್ನು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ಹೇಳಿದರು.