LATEST NEWS
ಸರ್ಕಾರಿ ನೌಕರರ ಮುಷ್ಕರ ಎಫೆಕ್ಟ್: ಉಡುಪಿ ʼಬಹುತೇಕ ಕಚೇರಿಗಳು ಖಾಲಿ ಖಾಲಿʼ
ಉಡುಪಿ, ಮಾರ್ಚ್ 01 : ರಾಜ್ಯದ ಸರ್ಕಾರಿ ನೌಕರರು 7ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಮುಷ್ಕರಕ್ಕೆ ಇಂದಿನಿಂದ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಉಡುಪಿಯ ಬಹುತೇಕ ಖಾಲಿ ಖಾಲಿಯಾಗಿದೆ.
ಸರ್ಕಾರಿ ನೌಕರರ ಮುಷ್ಕರಕ್ಕೆ ಆರೋಗ್ಯ ಇಲಾಖೆಯ ಅಧೀನಲ್ಲಿರುವ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಡುಪಿ ಜಿಲ್ಲೆಯ ಎಲ್ಲಾ ಸರ್ಕಾರಿ ಸೇವೆಗಳು ಬಹುತೇಕ ಬಂದ್ ಆಗಿದೆ. ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ 84 ಇಲಾಖೆಗಳಲ್ಲಿ ಬುಧವಾರ ಸೇವೆ ಲಭ್ಯವಾಗುತ್ತಿಲ್ಲ.
ಇಂದು ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ ಕಚೇರಿ, ತಾಲೂಕು ಕಚೇರಿ ನೌಕರರು ಸ್ವಯಂ ಪ್ರೇರಿತ ರಜೆ ಮಾಡಿದ್ದು, ಕಚೇರಿ ಆವರಣಗಳಲ್ಲಿ ಜನರಿಲ್ಲದೇ ಸ್ತಬ್ಧಗೊಂಡಿದೆ. ಮುಷ್ಕರದಲ್ಲಿ ಬರೊಬ್ಬರಿ 11 ಸಾವಿರ ನೌಕರರು ಪಾಲ್ಗೊಂಡಿದ್ದಾರೆ.