DAKSHINA KANNADA
ಮಂಗಳೂರು ನ್ಯಾಯಾಲಯದ ಮತ್ತೊಂದು ನೂತನ ಸಂಕೀರ್ಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್..!
ಮಂಗಳೂರು : ಮಂಗಳೂರು ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ಬಹುಮಹಡಿಗಳ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರಕಾರ ಕೊನೆಗೂ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಮಂಗಳೂರಿನಲ್ಲಿರುವ ಜಿಲ್ಲಾನ್ಯಾಯಾಲಯದ ಆವರಣದಲ್ಲಿ ಒಟ್ಟು ನಾಲ್ಕು ಕಟ್ಟಡಗಳಿದ್ದು, ಒಂದು ಕಟ್ಟಡದಲ್ಲಿ 2013 ರಲ್ಲಿ ಬಹುಮಹಡಿ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗಿದೆ. ಆ ಕಟ್ಟಡ 11,920 ಚದರಡಿ ವಿಸ್ತೀರ್ಣದೊಂದಿಗೆ ನಿರ್ಮಾಣವಾಗಿದ್ದು, ಅದು 8 ಮಹಡಿ ಹೊಂದಿದೆ. ಸರಕಾರಿ ಅಭಿಯೋಜಕರ ಕಟ್ಟಡ 1989 ರಲ್ಲಿ ನಿರ್ಮಾಣಗೊಂಡಿದ್ದು, ಈ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮತ್ತೊಂದು ಕಟ್ಟಡ 35 ವರ್ಷಗಳಷ್ಟು ಹಳೆಯದಾಗಿದೆ. 2023ರ ಅ.30ರಂದು 2 ಕಟ್ಟಡಗಳ ಜಾಗದಲ್ಲಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುವ ಬಗ್ಗೆ ಚಿಂತನೆ ನಡೆದು, ಲೋಕೋಪಯೋಗಿ ಇಲಾಖೆ ಮೂಲಕ ಅಂದಾಜು ಪಟ್ಟಿ ತಯಾರಿಸಲಾಗಿದೆ. ಬ್ಲಾಕ್ ಎ ಮತ್ತು ಬ್ಲಾಕ್ ಬಿ ಎರಡೂ ಸೇರಿ ಒಟ್ಟಾರೆ 14,068 ಚದರ ಮೀಟರ್ ವಿಸ್ತೀರ್ಣದ ನಿರ್ಮಾಣಕ್ಕೆ ಪ್ರಸ್ತಾಪಿಸಲಾಗಿದೆ. ಇವುಗಳಲ್ಲಿ ಬ್ಲಾಕ್ ಎಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. 9362 ಚದರ ಮೀಟರ್ ವಿಸ್ತೀರ್ಣದ 8 ಮಹಡಿ ಕಟ್ಟಡ ಇದಾಗಿದೆ. ಇವುಗಳಲ್ಲಿ 6 ಕೋರ್ಟ್ ಹಾಲ್‌ಗಳು, 1 ದುರ್ಬಲ ಸಾಕ್ಷಿ ಠೇವಣಿ ಕೇಂದ್ರ, 1 ಪೋಕ್ಸೊ ಕೋರ್ಟ್ ಹಾಲ್, ಕಂಪ್ಯೂಟರ್ ರೂಂಗಳು, ರೆಕಾರ್ಡ್ ರೂಂಗಳು, ಇ-ಫಿಲ್ಲಿಂಗ್ ರೂಂ, ಮ್ಯೂಸಿಯಂ ಲೈಬ್ರೆರಿ, ಪ್ರಾಪರ್ಟಿ ರೂಂ, ಮಹಿಳೆಯರು, ಬಾಲಾಪರಾಧಿಗಳು, ದಾವೆಗಳ ರೂಂ, ಜಡ್ಜ್‌ಗಳ ಕೊಠಡಿ, ಲಾಕಪ್, ಮೀಟಿಂಗ್ ಹಾಲ್ಸ್, ಆಫೀಸರ್‌ಗಳಿಗೆ ರೂಂಗಳಿವೆ.
ಹಳೆಯ ಕೋರ್ಟ್ ಸ್ಮಾರಕ’ ನಿರ್ಮಾಣ ನ್ಯಾಯಾಂಗ ನೌಕರರ ಸಹಕಾರಿ ಸಂಘ, ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿ, ಪ್ಲೆಡರ್ ಆಫೀಸ್, ಬಾರ್ ಅಸೋಸಿಯೇಶನ್ ಆಫೀಸ್, ಅಡ್ವೊಕೇಟ್ ವಿಡಿಯೊ ಕಾನ್ಫರೆನ್ಸ್, ಕ್ಯಾಂಟೀನ್, ಬ್ಯಾಂಕ್, ಪೋಸ್ಟ್ ಆಫೀಸ್, ಎಡಿಆರ್‌ಗೆ ಅವಕಾಶ ನೀಡಿ ಯೋಜನೆ ರೂಪಿಸಲಾಗಿದೆ. ಈ ಬ್ಲಾಕ್ ನಿರ್ಮಾಣ ಮಾಡುವಲ್ಲಿಸರಕಾರದ ಮೇಲೆ ಜಿಲ್ಲಾಉಸ್ತುವಾರಿ ಸಚಿವರು, ಸ್ಪೀಕರ್, ಸಚಿವರು, ಶಾಸಕರು ಒತ್ತಡ ತರಬೇಕಾಗಿದೆ.