Connect with us

    KARNATAKA

    ವಾಹನ ಸವಾರರಿಗೆ ಕೇಂದ್ರದಿಂದ ಶುಭ ಸುದ್ದಿ, ಶೀಘ್ರದಲ್ಲೇ ಪೆಟ್ರೋಲ್‌ ಬೆಲೆ ಇಳಿಕೆ..!

    ಬೆಂಗಳೂರು: ಕೇಂದ್ರ ಸರ್ಕಾರ ವಾಹನ ಸವಾರರಿಗೆ ಶುಭ ಸುದ್ದಿ ನೀಡಿದ್ದು ಶೀಘ್ರದಲ್ಲೇ ಪೆಟ್ರೋಲ್ , ಡಿಸೇಲ್ ಬೆಲೆ ಇಳಿಕೆಯ ಸುಳಿವು ನೀಡಿದ್ದಾರೆ.

    ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಇಳಿಕೆ ಆಗಿರುವುದರಿಂದ ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಇಳಿಸಲು  ಕೇಂದ್ರ ಸರ್ಕಾರ  ಆಲೋಚಿಸುತ್ತಿದ್ದು  ಪೆಟ್ರೋಲ್ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಈ ಬಗ್ಗೆ ಸುಳಿವು ನೀಡಿದ್ದಾರೆ.

    ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಸಾಕಷ್ಟು ಇಳಿಕೆ ಆಗಿರುವುದರಿಂದ ಭಾರತದಲ್ಲಿ ಪೆಟ್ರೋಲ್, ಡೀಸಲ್ ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳ ರೀಟೇಲ್ ಬೆಲೆಗಳನ್ನು ಇಳಿಸಲು ಸರ್ಕಾರ ಚಿಂತನೆ ನಡೆಸಿದೆ.

    ಜಾಗತಿಕ ತೈಲ ಬೆಲೆಗಳ ಅನುಸಾರವಾಗಿ ತಿಂಗಳಿಗೆ ಎರಡು ಬಾರಿ ಸರ್ಕಾರ ವಿಂಡ್​ಫಾಲ್ ಟ್ಯಾಕ್ಸ್ ಅನ್ನು ಪರಿಷ್ಕರಿಸುತ್ತದೆ. ಈಗ ಪೂರ್ಣವಾಗಿ ಟ್ಯಾಕ್ಸ್ ತೆಗೆದುಹಾಕುವ ಪ್ರಸ್ತಾಪ ಸರ್ಕಾರದ ಮುಂದಿದೆ. ತೈಲ ಸಂಸ್ಕರಣಾ ಕಂಪನಿಗಳಿಗೆ ಲಾಭದ ಮಾರ್ಜಿನ್ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ವಿಂಡ್​ಫಾಲ್ ಟ್ಯಾಕ್ಸ್ ತೆಗೆದುಹಾಕಲು ಯೋಚಿಸಲಾಗುತ್ತಿದೆ ಎನ್ನಲಾಗಿದೆ.

    ಇದು ಆದಾಯ ತೆರಿಗೆಯಲ್ಲಿನ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ರೀತಿಯಂಥದ್ದು. ಅಸ್ವಾಭಾವಿಕವಾಗಿ ಲಾಭ ಹೆಚ್ಚಳ ಆದಾಗ ವಿಂಡ್​ಫಾಲ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಪೆಟ್ರೋಲಿಯಂ ಸೇರಿ ಕೆಲ ಉದ್ಯಮಗಳಲ್ಲಿ ಸರ್ಕಾರ ಈ ತೆರಿಗೆ ಹಾಕುತ್ತದೆ. 2022ರಲ್ಲಿ ಮೊದಲ ಬಾರಿಗೆ ಸರ್ಕಾರ ವಿಂಡ್​ಫಾಲ್ ಟ್ಯಾಕ್ಸ್ ಜಾರಿಗೆ ತಂದಿತು.

    Share Information
    Advertisement
    Click to comment

    You must be logged in to post a comment Login

    Leave a Reply