LATEST NEWS
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಯತ್ನ -ಓರ್ವನ ಬಂಧನ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಯತ್ನ – ಓರ್ವನ ಬಂಧನ
ಮಂಗಳೂರು ಜೂನ್ 7: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ್ದ ಆರೋಪಿಯನ್ನು ಬಂಧಿಸಿ ಅಂದಾಜು 21 ಲಕ್ಷ ಬೆಲೆಬಾಳು ಚಿನ್ನವನ್ನು ಡಿಆರ್ ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಮಾಣಿಲ ನಿವಾಸಿ ಉಮ್ಮರ್ ಫಾರೂಕ್ ಎಂದು ಗುರುತಿಸಲಾಗಿದೆ. ಜೂನ್ 6 ರಂದು ಈ ಘಟನೆ ನಡೆದಿದ್ದು , ದುಬೈಯಿಂದ ಮಂಗಳೂರಿಗೆ ಆಗಮಿಸಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ್ದ ಆರೋಪಿ ಉಮ್ಮರ್ ಫಾರೂಕ್ ಅವರ ಲಗೇಜ್ ಪರಿಶೀಲನೆ ಸಂದರ್ಭ ಆತ ತಂದಿದ್ದ ಸ್ಪೀಕರ್ ಒಳಗಡೆ ಸುಮಾರು 699 ಗ್ರಾಂ ತೂಕದ ಚಿನ್ನದ ಬಾರ್ ನ್ನು ಅಡಗಿಸಿಟ್ಟದ್ದನು.
ಪರಿಶೀಲನೆ ವೇಳೆ ಡಿಆರ್ ಐ ಇಲಾಖೆಯವರು ಅಕ್ರಮ ಚಿನ್ನವನ್ನು ಪತ್ತೆ ಹಚ್ಚಿದ್ದಾರೆ. ಆರೋಪಿ ಉಮ್ಮರ್ ಫಾರೂಕ್ ಹಾಗೂ 699 ಗ್ರಾಂ ಚಿನ್ನವನ್ನು ಡಿಆರ್ ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಚಿನ್ನದ ಬೆಲೆ ಸುಮಾರು 21,52,300/ ಅಗಿದ್ದು. ಡಿಅರ್ ಐ ಅಧಿಕಾರಿಗಳು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.