LATEST NEWS
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನ
ಮಂಗಳೂರು ಡಿಸೆಂಬರ್ 18: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಮೊದಲ ಪ್ರಕರಣದಲ್ಲಿ ದುಬೈಯಿಂದ ಮಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕನೋರ್ವ ಸುಮಾರು 9.57 ಲಕ್ಷ ರೂಪಾಯಿ ಬೆಲೆ ಬಾಳುವ 24 ಕ್ಯಾರೆಟ್ ನ 247.70 ಗ್ರಾಂ ಚಿನ್ನವನ್ನು ತನ್ನ ತಲೆಯಲ್ಲಿ ಕೃತಕ ತಲೆಕೂದಲಿನ ಅಡಿಯಲ್ಲಿ ಅಡಗಿಸಿಟ್ಟು ಅಕ್ರಮ ಸಾಗಾಟಕ್ಕೆ ಯತ್ನಿಸಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಇನ್ನೊಂದು ಪ್ರಕರಣ ಕೊಲ್ಲಿ ರಾಷ್ಟ್ರ ಅಬುದಾಬಿಯಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕನೋರ್ವ ಕಾರ್ಪೆಂಟರ್ ಬಳಸುವ ಅಳತೆ ಟೇಪ್ ನಲ್ಲಿ ಚಿನ್ನವನ್ನು ಹುದುಗಿಸಿಟ್ಟು ಅಕ್ರಮ ಸಾಗಾಟಕ್ಕೆ ಯತ್ನಿಸಿ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಸುಮಾರು 11.76 ಲಕ್ಷ ಬೆಲೆ ಬಾಳುವ 24 ಕ್ಯಾರೆಟ್ ನ 307.20 ಗ್ರಾಂ ಚಿನ್ನವನ್ನು ಅಳತೆ ಟೇಪ್ ಮಾದರಿಯಲ್ಲಿ ಅಕ್ರಮ ಸಾಗಾಟಕ್ಕೆ ಯತ್ನಿಸಿದ್ದಾನೆ.