LATEST NEWS
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 66 ಲಕ್ಷ ಬೆಲೆಬಾಳುವ 2 ಕೆಜಿ ಅಕ್ರಮ ಚಿನ್ನ ಪತ್ತೆ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 66 ಲಕ್ಷ ಬೆಲೆಬಾಳುವ 2 ಕೆಜಿ ಅಕ್ರಮ ಚಿನ್ನ ಪತ್ತೆ
ಮಂಗಳೂರು ಮೇ 17: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮ ಚಿನ್ನ ಸಾಗಾಟಕ್ಕೆ ಪ್ರಯತ್ನ , ಸುಮಾರು 66 ಲಕ್ಷ ರೂಪಾಯಿ ಬೆಲೆ ಬಾಳುವ 2 .116 ಕೆಜಿ ಯಷ್ಟು ಅಕ್ರಮ ಚಿನ್ನವನ್ನು ಡಿಆರ್ ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ ನಂತರ ಪತ್ತೆಯಾದ ಮೊದಲ ಅಕ್ರಮ ಚಿನ್ನ ಸಾಗಾಟ ಪ್ರಕರಣ ಇದಾಗಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯಡಿ ದಾಳಿ ಮಾಡಿದ ಡಿಆರ್ ಐ ಅಧಿಕಾರಿಗಳು , ಮುಂಬೈನಿಂದ ಬಂದ ಸ್ಪೈಸ್ ಜೆಟ್ ವಿಮಾನದಲ್ಲಿದ್ದ ಸುಮಾರು 2 ಕೆಜಿ 116 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನದ ಬೆಲೆ ಸುಮಾರು 66 ಲಕ್ಷ ಎಂದು ಅಂದಾಜಿಸಲಾಗಿದೆ.

ಮುಂಬಯಿಯಿಂದ ಮಂಗಳೂರಿಗೆ ಬಂದಿದ್ದ ಸ್ಪೈಸ್ ಜೆಟ್ ವಿಮಾನದ ಟಾಯ್ಲೆಟ್ ನ ಆಕ್ಸಿಜೆನ್ ಮಾಸ್ಕ್ ಪ್ಯಾನೆಲ್ ನಲ್ಲಿ ಈ ಚಿನ್ನವನ್ನು ಅಡಗಿಸಿಡಲಾಗಿತ್ತು. ಈ ವಿಮಾನ ಮಂಗಳೂರಿಗೆ ಬರುವ ಮೊದಲು ಅಂತರಾಷ್ಟ್ರೀಯ ಹಾರಾಟವನ್ನು ಮುಗಿಸಿತ್ತು. ದುಬೈಯಿಂದ ಮುಂಬಯಿಗೆ ಈ ವಿಮಾನ ಬಂದಿತ್ತು, ನಂತರ ಮುಂಬಯಿಯಿಂದ ಮಂಗಳೂರಿಗೆ ದೇಶಿಯ ಹಾರಾಟವನ್ನು ಈ ವಿಮಾನ ನಡೆಸಿತ್ತು.
ಮಾಹಿತಿ ಪ್ರಕಾರ ದುಬೈಯಿಂದ ಅಕ್ರಮವಾಗಿ ಚಿನ್ನವನ್ನು ಈ ವಿಮಾನದಲ್ಲಿ ಅಡಗಿಸಿಡಲಾಗಿತ್ತು. ನಂತರ ಈ ವಿಮಾನ ಮುಂಬಯಿಯಿಂದ ಮಂಗಳೂರಿಗೆ ಬಂದಿತ್ತು. ಮಂಗಳೂರಿನಲ್ಲಿ ಈ ವಿಮಾನದಲ್ಲಿದ್ದ ಚಿನ್ನವನ್ನು ಅಕ್ರಮ ಸಾಗಾಟಕ್ಕೆ ಯತ್ನಿಸಲಾಗಿದೆ. ಆದರೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಡಿಆರ್ ಐ ವಿಭಾಗದ ಅಧಿಕಾರಿಗಳು ಈ ಅಕ್ರಮ ಸಾಗಾಟವನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ ನಂತರ ನಡೆದ ಮೊದಲ ಸಂಘಟಿತ ಅಕ್ರಮ ಚಿನ್ನ ಸಾಗಾಟ ಪ್ರಕರಣ ಇದಾಗಿದೆ. ಡಿಆರ್ ಐ ಅಧಿಕಾರಿಗಳು ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.