Connect with us

LATEST NEWS

ಜನಾರ್ಧನ ಪೂಜಾರಿಗೆ ಕನಸಲ್ಲಿ ಸಾಕ್ಷಾತ್ ಶಿವ ಪ್ರತ್ಯಕ್ಷ, ಪೂಜಾರಿಗೆ ಅಂಹಕಾರಿ ಎನ್ನಲು ಕಾರಣವೇನು

ಜನಾರ್ಧನ ಪೂಜಾರಿಗೆ ಕನಸಲ್ಲಿ ಸಾಕ್ಷಾತ್ ಶಿವ ಪ್ರತ್ಯಕ್ಷ, ಪೂಜಾರಿಗೆ ಅಂಹಕಾರಿ ಎನ್ನಲು ಕಾರಣವೇನು

ಮಂಗಳೂರು ಅಕ್ಟೋಬರ್ 27: ಪುರಾಣ ಕಾಲದಲ್ಲಿ ರಾಜ-ಮಹಾರಾಜರಿಗೆ, ದೈವಭಕ್ತರಿಗೆ ದೇವರು ಕನಸಲ್ಲಿ ಬಂದು ಮಾರ್ಗದರ್ಶನ ಮಾಡುವುದು, ಅಶರೀರವಾಣಿ ಕೇಳಿಸೋದು ಈ ಎಲ್ಲವನ್ನೂ ಪುರಾಣ ಗ್ರಂಥಗಳಲ್ಲಿ ಓದಿದ್ದವೆ.

ಆದರೆ ಈ ಕಲಿ ಕಾಲದಲ್ಲೂ ಇಂಥ ಘಟನೆಗಳು ನಡೆಯುತ್ತದೆಯೋ ಎನ್ನುವ ಗೊಂದಲ , ಆಶ್ಚರ್ಯ ಎಲ್ಲರಲ್ಲೂ ಮೂಡದೇ ಇರಲಾರದು.
ಹೌದು ಇಂಥಹುದೊಂದು ಗೊಂದಲ, ಆಶ್ಚರ್ಯವನ್ನು ಹಿರಿಯ ಕಾಂಗ್ರೇಸ್ ಮುಖಂಡ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ರೂವಾರಿ ಬಿ.ಜನಾರ್ಧನ ಪೂಜಾರಿ ಹುಟ್ಟು ಹಾಕಿದ್ದಾರೆ.

ಹೌದು ಪುರಾಣ ಕಾಲದಲ್ಲಿ , ರಾಜ-ಮಹಾರಾಜರ ಕಾಲದಲ್ಲಿ ರಾಜ್ಯದಲ್ಲಿ ಸುಭೀಕ್ಷೆ ಮರೆಯಾದ ಸಂದರ್ಭದಲ್ಲಿ ಆ ರಾಜ್ಯದ ರಾಜನ ಕನಸಲ್ಲಿ ದೇವರು ಪ್ರತ್ಯಕ್ಷನಾಗಿ ರಾಜನಿಗೆ ಮಾರ್ಗದರ್ಶನ ನೀಡುವುದನ್ನೂ, ಅಶರೀರವಾಣಿಯ ಮೂಲಕ ಆತನನ್ನು ಎಚ್ಚರಿಸುವುದನ್ನೋ ಪುರಾಣ ಗ್ರಂಥಗಳಲ್ಲಿ ಓದಿ ತಿಳಿದಿದ್ದೇವೆ.

ಆದರೆ ಇಂಥ ಘಟನೆಗಳು ಇಂದಿನ ಕಲಿಯುಗದಲ್ಲೂ ನಡೆಯುತ್ತದೆಯೋ ಎನ್ನುವುದನ್ನು ಒಪ್ಪಿಕೊಳ್ಳಲು ಜನ ಸಿದ್ಧರಿಲ್ಲ. ಇದೇನಿದ್ದರೂ ತಂತ್ರಜ್ಞಾನದ ಯುಗವಾಗಿದ್ದು, ಇಲ್ಲಿ ದೇವರು ಪ್ರತ್ಯಕ್ಷವಾಗುವುದಕ್ಕೆ, ಅಶರೀರವಾಣಿ ಕೇಳಿಸುವುದಕ್ಕೆ ಯಾವುದೇ ಮಹತ್ವವೂ ಇಲ್ಲ. ಆದರೆ ಇಂಥಹುದೊಂದು ಆಶ್ಚರ್ಯಕರ ಹೇಳಿಕೆಯನ್ನು ನೀಡುವ ಮೂಲಕ ಕಾಂಗ್ರೇಸ್ ನ ಹಿರಿಯ ಮುಖಂಡ ಹಾಗೂ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ರೂವಾರಿ ಬಿ.ಜನಾರ್ಧನ ಪೂಜಾರಿ ಇದೀಗ ಸುದ್ಧಿಯಲ್ಲಿದ್ದಾರೆ.

ಅಕ್ಟೋಬರ್ 26 ರಂದು ಕುದ್ರೋಳಿ ದೇವಸ್ಥಾನದಲ್ಲಿ ದಿಢೀರನೆ ಎಂಬಂತೆ ದೇವಸ್ಥಾನ ಧ್ವಜಸ್ಥಂಭಕ್ಕಾಗಿ ತಂದ ಮರಕ್ಕೆ ಪೂಜೆ ನೆರವೇರುತ್ತದೆ. ಈ ರೀತಿಯ ದಿಢೀರ್ ಪೂಜೆಗೆ ಕಾರಣವೇನು ಎನ್ನುವ ಪ್ರಶ್ನೆ ಮೂಡಿದ ಹಿನ್ನಲೆಯಲ್ಲಿ ಜನಾರ್ಧನ ಪೂಜಾರಿ ತಮಗಾದ ಅನುಭವವನ್ನು ಭಕ್ತರ ಮುಂದೆ ಹಂಚಿಕೊಳ್ಳುತ್ತಾರೆ.

ಅಕ್ಟೋಬರ್ 25 ರಾತ್ರಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಸಾಕ್ಷಾತ್ ಶಿವ ಜನಾರ್ಧನ ಪೂಜಾರಿಯವರನ್ನು ನಿದ್ಧೆಯಿಂದ ಎಬ್ಬಿಸಿದ್ದನಂತೆ. ನನ್ನನ್ನು ಮರೆತಿದ್ದಿ, ನಿನಗೆ ಅಹಂಕಾರ ಜಾಸ್ತಿಯಾಗಿದೆ ಎಂದು ಪೂಜಾರಿಯವರನ್ನು ಶಿವ ಚೆನ್ನಾಗಿ ಜಾಡಿಸಿದ್ದಾನೆ. ಇದರಿಂದ ಎಚ್ಚೆತ್ತ ಜನಾರ್ಧನ ಪೂಜಾರಿ ನಾಳೆಯೇ ದೇವಸ್ಥಾನಕ್ಕೆ ಬರುತ್ತೇನು, ಬಂದು ಪೂಜೆ ಸಲ್ಲಿಸುತ್ತೇನೆ ಎಂದು ಶಿವನ ಕಾಲಿಗೆ ಅಡ್ಡ ಬಿದ್ದ ಕ್ಷಮೆಯನ್ನೂ ಯಾಚಿಸಿದ್ದರು.

ದೇವಸ್ಥಾನದಲ್ಲಿ ಈಗಿರುವ ಕೊಡಿಮರ (ಧ್ವಜಸ್ತಂಭ) ಹಳೆಯದಾಗಿದೆ ಎನ್ನುವ ಕಾರಣಕ್ಕಾಗಿ ಹೊಸ ಕೊಡಿಮರ ಸ್ಥಾಪಿಸುವುದಕ್ಕೋಸ್ಕರ ಕಳೆದ ವರ್ಷ ಫೆಬ್ರವರಿ 12 ರಂದು ಮರವೊಂದನ್ನು ತರಲಾಗಿತ್ತು. ಸುಳ್ಯದ ಉಬರಡ್ಕದಿಂದ ಸುಮಾರು 80 ಅಡಿ ಉದ್ದದ ಸಾಗುವಾನಿ ಮರವನ್ನು ಇದಕ್ಕಾಗಿ ಗುರುತಿಸಲಾಗಿತ್ತು. ತಂದ ಮರಕ್ಕೆ ಶೆಡ್ ನಿರ್ಮಿಸಿ , ಮರವನ್ನು ಎಳ್ಳೆಣ್ಣೆಯಲ್ಲಿ ಮುಳುಗಿಸಿ ಇಡಲಾಗಿತ್ತು.

ಹೀಗೆ ಇಡುವುದರಿಂದ ಮರ ಗಟ್ಟಿಯಾಗುತ್ತದೆ. ಹೀಗೆ ಇಟ್ಟಿದ್ದ ಮರಕ್ಕೆ ಪೂಜೆ ಸಲ್ಲಿಸಲಿಲ್ಲ ಎನ್ನುವ ಕಾರಣಕ್ಕೇನೋ ಶಿವ ಕನಸಿನಲ್ಲಿ ಬಂದಿರುವುದು ಎಂದುಕೊಂಡ ಜನಾರ್ಧನ ಪೂಜಾರಿ ಅಕ್ಟೋಬರ್ 26 ರಂದು ತರಾತುರಿಯಲ್ಲಿ ಕುದ್ರೋಳಿ ದೇವಸ್ಥಾನಕ್ಕೆ ಬಂದು ಎಣ್ಣೆಯಲ್ಲಿ ಅದ್ದಿಟ್ಟಿದ್ದ ಕೊಡಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನನ್ನ ಮೇಲಿನ ಕೋಪಕ್ಕೆ ಇಡೀ ಸಮಾಜಕ್ಕೆ ತೊಂದರೆ ಮಾಡಬೇಡ ಎನ್ನುವ ಹರಕೆಯನ್ನೂ ಪೂಜಾರಿ ದೇವರ ಮುಂದೆ ಮಾಡುವ ಮೂಲಕ ಗದ್ಗರಿತರಾಗಿದ್ದಾರೆ.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *