LATEST NEWS
ಗೋವಾದಿಂದ 73 ಲಕ್ಷ ಮೌಲ್ಯದ ಹೈಡ್ರೋ ವೀಡ್ ಗಾಂಜಾ ತಂದ ಆರೋಪಿ ಅರೆಸ್ಟ್
ಮಂಗಳೂರು ಜನವರಿ 10: ಗೋವಾದಿಂದ ಮಂಗಳೂರು ಹಾಗೂ ಕೇರಳಕ್ಕೆ 73 ಲಕ್ಷ ಮೌಲ್ಯದ ಹೈಡ್ರೋವೀಡ್ ಗಾಂಜಾ ತೆಗೆದುಕೊಂಡು ಬರುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿ.ಯನ್ನು ಕೇರಳದ ಕೋಜಿಕ್ಕೋಡ್ ಜಿಲ್ಲೆಯ ಉನ್ನಿಕೂಲಂ ನಿವಾಸಿ ಶಮೀರ್ ಪಿಕೆ (42) ಎಂದು ಗುರುತಿಸಲಾಗಿದೆ. ಆರೋಪಿ ಕೆಂಪು ಬಣ್ಣದ ಹುಂಡೈ ಕಾರಿನಲ್ಲಿ 73 ಲಕ್ಷ ಮೌಲ್ಯದ ಹೈಡ್ರೋವೀಡ್ ಗಾಂಜಾವನ್ನು ಗೋವಾದಿಂದ ಮಂಗಳೂರಿಗೆ ತರುತ್ತಿದ್ದಾನೆಂಬ ಖಚಿತ ಮಾಹಿತಿಯೊಂದಿಗೆ ಪೊಲೀಸರು ಮುಲ್ಕಿ ಬಪ್ಪನಾಡು ಬಳಿ ಅಡ್ಡಹಾಕಿದ್ದು ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. 73 ಲಕ್ಷ ಮೌಲ್ಯದ 738 ಗ್ರಾಮ್ ತೂಕದ ಹೈಡ್ರೋವೀಡ್ ಗಾಂಜಾ, ಸಾಗಾಟಕ್ಕೆ ಬಳಸಿದ ಹುಂಡೈ ಕಾರು, ಮೊಬೈಲ್ ಸಹಿತ ಒಟ್ಟು 80 ಲಕ್ಷ ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಶ್ಯಾಮಸುಂದರ್, ಪಿಎಸ್ಐ ಶರಣಪ್ಪ ಭಂಡಾರಿ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.