LATEST NEWS
ಸರಿಯಾಗಿ ನಿಲ್ಲಲು ಆಗದ ಸ್ಥಿತಿ..ತಂಡದ ಗೆಲುವಿಗಾಗಿ ನೋವು ನುಂಗಿ ನಿಂತ ಮ್ಯಾಕ್ಸವೆಲ್… ಕ್ರಿಕೆಟ್ ಜಗತ್ತಿನ ಶ್ರೇಷ್ಠ ಇನ್ನಿಂಗ್ಸ್

ಮುಂಬೈ ನವೆಂಬರ್ 08: ವಿಪರೀತ ಬೆನ್ನು ನೋವು ಸರಿಯಾಗಿ ನಿಲ್ಲಲು ಆಗದ ಸ್ಥಿತಿ, ತಂಡ ಸೋಲಿನ ದವಡೆಯಲ್ಲಿ ,ಯಾವುದೇ ಕ್ರಿಕೆಟ್ ಪಂಡಿತರು ಆಸ್ಟ್ರೇಲಿಯಾ ಗೆಲ್ಲುತ್ತದೆ ಎಂದು ಹೇಳಲು ಸಾಧ್ಯವಾಗದ ಸ್ಥಿತಿಯಲ್ಲಿ ಅಪತ್ಬಾಂದವನಂತೆ ನಿಂತ ಗ್ಲೆನ್ ಮ್ಯಾಕ್ಸವೆಲ್ ಆಸ್ಟ್ರೇಲಿಯಾತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ್ದಾರೆ. ಇಡೀ ವಿಶ್ವವೇ ಅಚ್ಚರಿ ಪಡುವಂತೆ ನಡೆದ ಈ ಪಂದ್ಯ ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್ ಎಂದು ದಿಗ್ಗಜರ ಗುಣಗಾನ ಮಾಡಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಅಪ್ಘಾನಿಸ್ತಾನ ಇಬ್ರಾಹಿ ಜದ್ರಾನ್ ರ ಶತಕದ ನೆರವಿನಿಂದ 5 ವಿಕೆಟ್‌ಗೆ 291 ರನ್ ಕಲೆಹಾಕಿತು. ವಾಖಂಡೆ ಮೈದಾನದಲ್ಲಿ ಇದು ಒಂದು ಉತ್ತಮ ಮೊತ್ತವಾಗಿದ್ದರೂ , ನಂತರ ಬ್ಯಾಟ್ ಗೆ ಇಳಿದ ಆಸ್ಟ್ರೇಲಿಯಾದ ಬ್ಯಾಟ್ಸ ಮನ್ ಗಳು ಮಾತ್ರ ರನ್ ಗಳಿಸಲು ಪರದಾಡಿದರು. ಎಲ್ಲಿಯವರೆಗೆ ಅಂದರೆ 91 ರನ್‌ಗೆ 7 ವಿಕೆಟ್ ಕಳೆದುಕೊಂಡು ಹೀನಾಯ ಸೋಲನ್ನು ಎದುರು ನೋಡುತ್ತಿದ್ದ ಆಸ್ಟ್ರೇಲಿಯನ್ನರ ಪಾಲಿನ ಆಪದ್ಭಾಂದವರಾಗಿದ್ದು ಮ್ಯಾಕ್ಸ್ ವೆಲ್. ಮುರಿಯದ 8ನೇ ವಿಕೆಟ್‌ಗೆ ಪ್ಯಾಟ್ ಕಮಿನ್ಸ್ ಜೊತೆಗೂಡಿ 170 ಎಸೆತದಲ್ಲಿ 202 ರನ್ ಕಲೆಹಾಕಿದ ಮ್ಯಾಕ್ಸ್ ವೆಲ್, ಇನ್ನೂ 19 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲ್ಲಿಸಿದರು. 128 ಎಸೆತದಲ್ಲಿ 21 ಬೌಂಡು, 10 ಸಿಕರ್‌ನೊಂದಿಗೆ ಔಟಾಗದೆ 204 ರನ್ ಚಚ್ಚಿ, ಅಫನ್ ಆಸೆಗೆ ತಣ್ಣೀರೆರೆಚಿದರು. ನಾಯಕನ ಆಟವಾಡಿದ ಕಮಿನ್ಸ್, ಮ್ಯಾಕ್ಸ್‌ವೆಲ್ ಜೊತೆ ಗಟ್ಟಿಯಾಗಿ ನೆಲೆಯೂರಿ 68 ಎಸೆತಗಳಲ್ಲಿ 12 ರನ್ ಗಳಿಸಿದರು.

ಆಸ್ಟ್ರೇಲಿಯಾಕ್ಕೆಗೆಲುವಿಗೆ 100 ಗಿಂತ ಹೆಚ್ಚು ಬೇಕಿದ್ದಾಗ ಮ್ಯಾಕ್ಸ್‌ವೆಲ್ ಸ್ನಾಯು ಸೆಳೆತಕ್ಕೆ ಒಳಗಾದರು. ಇನ್ನಿಂಗ್ಸ್ ಸಾಗಿದಂತೆ ನೋವ ಹೆಚ್ಚಾಯಿತು, ಪ್ರತಿ ಎಸೆತ ಎದುರಿಸಿದಾಗಲೂ ಒಂದು ಹಂತದಲ್ಲಿ ನಿಲ್ಲಲು ಸಹ ಆಗುತ್ತಿ ರಲಿಲ್ಲ. ಇನ್ನೇನು ಮ್ಯಾಕ್ಸ್‌ವೆಲ್ ರಿಟೈರ್ಡ್ ಹರ್ಟ್ ಆಗಿ ಹೊರನಡೆಯಲಿದ್ದಾರೆ ಎನ್ನುವ ಪರಿಸ್ಥಿತಿ ಇತ್ತು. ಅ್ಯಡಂ ಜಂಪಾ ಕ್ರೀಸ್ ನಲ್ಲಿ ಸಿದ್ಧರಾಗಿ ಬಂದು ನಿಂತಿದ್ದರು, ಆದರೆ ಮ್ಯಾಕ್ಸ್‌ವೆಲ್ ಛಲ ಬಿಡಲಿಲ್ಲ, ಬಹಳ ಲೆಕ್ಕಾಚಾರ ದೊಂದಿಗೆ ಬ್ಯಾಟ್ ಮಾಡಿ ಹೆಚ್ಚು ಬೌಂಡರಿ, ಸಿಕ್ಸರ್ ಸಿಡಿಸುವ ಕಡೆಗೆ ಗಮನ ನೀಡಿದರು. ಓವರ್‌ನ ಕೊನೆ ಎಸೆತದಲ್ಲಿ ಕಷ್ಟದಿಂದ ಒಂದು ರನ್ ಪಡೆದು ಸ್ಟ್ರೈಕ್‌ನಲ್ಲಿ ಉಳಿದರು. ಮ್ಯಾಕ್ಸ್ ವೆಲ್ ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಭಾರಿಸಿದ 9ನೇ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಮ್ಯಾಕ್ಸ್ ವೆಲ್ ಅವರ ಈ ಇನ್ನಿಂಗ್ಸ್ ಅನ್ನು ಕ್ರಿಕೆಟ್ ಜಗತ್ತು ಒಂದು ಅದ್ಬುತ ಎಂದು ಬಣ್ಣಿಸಿದೆ.